ಕೊಡಗು ನಿರಾಶ್ರಿತರ ನೆರವಿಗೆ ನಿಂತ ನಟಿ ರಶ್ಮಿಕಾ ಮಂದಣ್ಣ

ಗುರುವಾರ, 30 ಆಗಸ್ಟ್ 2018 (08:29 IST)
ಬೆಂಗಳೂರು : ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಹಲವು ನಟ ನಟಿಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಇದೀಗ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಕುಟುಂಬದವರು ಕೂಡ ಮನೆ-ಮಠ ಕಳೆದುಕೊಂಡ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.


ನಟಿ ರಶ್ಮಿಕಾ ಮಂದಣ್ಣ ತಾವೇ ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಹಾಯ ಮಾಡಬೇಕು ಎಂದುಕೊಂಡಿದ್ರಂತೆ. ಆದರೆ ಅಲ್ಲಿ ಜನ ವಾಸ ಮಾಡುತ್ತಿಲ್ಲ, ಹಾಗೇ ರಸ್ತೆ ಕೂಡ ಸರಿಯಿಲ್ಲ  ಎಂದು ಅವರ ತಂದೆ ಹೇಳಿದ ಕಾರಣ ಎಲ್ಲರನ್ನು ವಿರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಕರೆಸಿಕೊಂಡು ನೆರವು ನೀಡಿದ್ದಾರೆ.


ರಶ್ಮಿಕಾ ಒಟ್ಟು 31 ಕುಟುಂಬಕ್ಕೆ ತಲಾ 10 ಸಾವಿರ ರೂ. ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಸಹಾಯ ಮಾಡುವುದಾಗಿ ರಶ್ಮಿಕಾ ಹಾಗೂ ಅವರ ಕುಟುಂಬದವರು ಭರವಸೆ ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ