ಚಂದನ್ ಶೆಟ್ಟಿ ಆಯ್ತು ಈಗ ಅರ್ಜುನ್ ಜನ್ಯ ಮೇಲೆ ವಕ್ರದೃಷ್ಟಿ ಹರಿಸಿದ ಸಿಸಿಬಿ ಪೊಲೀಸರು

ಬುಧವಾರ, 29 ಆಗಸ್ಟ್ 2018 (06:56 IST)
ಬೆಂಗಳೂರು : ಈಗಾಗಲೇ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ  ‘ಅಂತ್ಯ’ ಸಿನಿಮಾದಲ್ಲಿನ‌ ಹಾಡೊಂದು ಮಾದಕ ವಸ್ತುಗಳ ಬಗ್ಗೆ ಪ್ರಚೋದನೆ ನೀಡುವಂತಿರುವ ಕಾರಣ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿ ಅವರಿಗೆ ಸಮನ್ಸ್ ನೀಡಿದ್ದು, ಈ ಬಗ್ಗೆ ಈಗಾಗಲೇ ಚಂದನ್  ಕ್ಷಮೆ ಕೇಳಿದ್ದಾರೆ. ಅದೇರೀತಿ ಇದೀಗ ಕನ್ನಡದ ಮತ್ತೊಬ್ಬ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಮೇಲೆ ಸಿಸಿಬಿ ಪೊಲೀಸರು ವಕ್ರದೃಷ್ಟಿ ಹರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಸ್ಯಾಂಡಲ್ ವುಡ್ ನಟ ಶರಣ್ ಅಭಿನಯದ ‘ರ್ಯಾಂಬೋ – 2’ ಚಿತ್ರದಲ್ಲಿನ ‘ಧಮ್ ಮಾರೋ ಧಮ್’ ಹಾಡು ಹಿಟ್ ಆಗಿತ್ತು. ಈ ಹಾಡಿಗೆ ನಟಿ ಐಂದ್ರಿತಾ ರೈ ಸ್ಟೆಪ್ ಹಾಕಿದ್ರು . ಈ ಹಾಡಿಗೆ ಕನ್ನಡದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಇದೀಗ ಈ ಹಾಡು ಮಾದಕ ವಸ್ತು ಸೇವನೆಗೆ ಪ್ರಚೋದನೆ ನೀಡುತ್ತೆ ಎಂಬ ನಿಟ್ಟಿನಲ್ಲಿ ಅರ್ಜುನ್ ಜನ್ಯ ಅವರಿಗೂ  ನೊಟೀಸ್ ನೀಡಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.


ಮೊದಲ ಹಂತವಾಗಿ ಅವರನ್ನು ಕರೆಯಿಸಿ ಬುದ್ಧಿವಾದ ಹೇಳಿ ಕಳುಹಿಸುತ್ತೇವೆ.‌ ನಂತರ ಇದೇ ಪರಿಸ್ಥಿತಿ‌ ಮರುಕಳಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ