ನೆಲಗಡಲೆ ತಿಂದ ನಂತರ ನೀರು ಕುಡಿಯಬಾರದಾ?

ಬುಧವಾರ, 29 ಆಗಸ್ಟ್ 2018 (09:57 IST)
ಬೆಂಗಳೂರು : ನೆಲಗಡಲೆ ತಿಂದ ನಂತರ ನಮ್ಮ ಹಿರಿಯರು ನೀರು ಕುಡಿಯಬಾರದು ಎಂದು ಹೇಳುತ್ತಾರೆ. ಇದು ನಿಜವೇ? ಹಿರಿಯರು ಈ ರೀತಿ ಹೇಳಲು ಕಾರಣವೇನು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಎಂಬುದನ್ನು ಮೊದಲು ತಿಳಿಯೋಣ


ಎಣ್ಣೆಯಂಶ ಹೊಂದಿರುವ ಯಾವುದೇ ಆಹಾರವನ್ನು ಸೇವಿಸಿದ ನಂತರ ತಣ್ಣಗಿನ ನೀರು ಅಥವಾ ತಣ್ಣಗಿನ ಯಾವುದೇ ಪಾನೀಯ ಸೇವಿಸಿದರೆ ಅದರಲ್ಲಿರುವ ಕೊಬ್ಬಿನಂಶ ನಮ್ಮ ಆಹಾರದ ನಾಳದಲ್ಲಿ ಉಳಿದುಬಿಡುತ್ತದೆ. ಹೀಗಾಗಿ ಗಂಟಲಿನಲ್ಲಿ ಕಿರಿಕಿರಿಯುಂಟಾಗಿ ಕೆಮ್ಮು ಪ್ರಾರಂಭವಾಗುತ್ತದೆ ಎಂದು ನಮ್ಮ ಹಿರಿಯರು ನೆಲಗಡಲೆ ತಿಂದ ನಂತರ ನೀರು ಕುಡಿಯಬಾರದು ಎನ್ನುತ್ತಾರೆ.


ಆದರೆ ತಜ್ಷರು ಈ ಕಾರಣವನ್ನು ಬೆಂಬಲಿಸುವುದಿಲ್ಲ. ಯಾಕೆಂದರೆ ನೆಲಕಡಲೆಯಲ್ಲಿರುವುದು ಪೂರ್ತಿ ಆರ್ದ್ರವಾಗುವ ಕೊಬ್ಬು (saturated fats). ಆದ್ದರಿಂದ ಇದನ್ನು ತಿಂದು ನೀರು ಕುಡಿಯುವುದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುತ್ತಾರೆ.


ಹಾಗೇ ಆಯುರ್ವೇದದ ಪ್ರಕಾರ ಕೆಲವು ನಿಗದಿತ ಎಣ್ಣೆಯುಕ್ತ ಆಹಾರಗಳನ್ನು ನೀರಿನ ಜೊತೆ ಸೇವಿಸುವುದರಿಂದ ಆರೋಗ್ಯದ ಹಲವು ಸಮಸ್ಯೆಗಳನ್ನು ಗುಣಪಡಿಸಬಹುದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ