ಅಶ್ಲೀಲ ವಿಡಿಯೋಗಳ ನಿರ್ಮಾಣ: ಶಿಲ್ಪಾ ಶೆಟ್ಟಿ ಪತಿಯ ಕಚೇರಿಗಳ ಮೇಲೆ ಇಡಿ ದಾಳಿ

Sampriya

ಶುಕ್ರವಾರ, 29 ನವೆಂಬರ್ 2024 (15:11 IST)
Photo Courtesy X
ಮುಂಬೈ:  ಅಶ್ಲೀಲ ವಿಡಿಯೋಗಳ ನಿರ್ಮಾಣ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್‌ಕುಂದ್ರಾ ಸೇರಿ ಇತರರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿನಡೆಸಿದ್ದಾರೆ.  

ಈ ಸಂಬಂಧ ಮುಂಬೈ ಮತ್ತು ಉತ್ತರ ಪ್ರದೇಶದ ಸುಮಾರು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಇತರ ಮೋಡ್‌ಗಳ ಮೂಲಕ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ಹಂಚಿಕೆ ಮಾಡಿದ ಸಂಬಂಧ ಈ ದಾಳಿ ನಡೆಸಲಾಗಿದೆ.

ಈ ಹಿಂದೆ, ಡಿಸೆಂಬರ್ 13, 2022 ರಂದು ಸುಪ್ರೀಂ ಕೋರ್ಟ್ ಅಶ್ಲೀಲ ವೀಡಿಯೊಗಳನ್ನು ವಿತರಿಸಿದ ಆರೋಪದ ಮೇಲೆ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಮತ್ತು ನಟರಾದ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಸೇರಿದಂತೆ ಇತರರಿಗೆ ನಿರೀಕ್ಷಣಾ ಜಾಮೀನು ನೀಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ