ಬೆಂಗಳೂರು: ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ತಾಯಿ ವಿಜಯ ಸುಂದರಂ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿರುವ ಸಂತೃಪ್ತಿ ಹೋಟೆಲ್ ನಲ್ಲಿ ತಂಗಿದ್ದ ವಿಜಯಲಕ್ಷ್ಮಿ ಕುಟುಂಬ ಇಂದು ಚೆನ್ನೈಗೆ ಹೋಗಲು ಸಿದ್ಧವಾಗಿತ್ತು ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಸಹಾಯ ಮಾಡಿ ಎಂದು ಪದೇ ಪದೇ ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆಯಿಡುತ್ತಿದ್ದರು. ಇತ್ತೀಚೆಗೆ ಅಭಿಮಾನಿಯೊಬ್ಬರು ನೀಡಿದ ಮನೆ ಸರಿಯಿಲ್ಲವೆಂಬ ಕಾರಣಕ್ಕೆ ಅಲ್ಲಿಂದ ಬೆಂಗಳೂರಿಗೆ ವಾಪಸಾಗಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.
ತಾಯಿ ಮತ್ತು ಅಕ್ಕ ಉಷಾ ಜೊತೆಗೆ ವಾಸ ಮಾಡುತ್ತಿದ್ದ ವಿಜಯಲಕ್ಷ್ಮಿ ಅಕ್ಕನ ಅನಾರೋಗ್ಯದ ಬಗ್ಗೆ ಪದೇ ಪದೇ ಹೇಳಿಕೊಳ್ಳುತ್ತಿದ್ದರು. ಇದೀಗ ತಾಯಿ ನಿಧನರಾಗಿರುವುದು ಅವರಿಗೆ ಆಘಾತವುಂಟು ಮಾಡಿದೆ.