ಮಗುವಾದ ಬೆನ್ನಲ್ಲೇ ಬದುಕಿನ ದೊಡ್ಡ ಕನಸು ಬಿಚ್ಚಿಟ್ಟ ಅದಿತಿ ಪ್ರಭುದೇವ

Sampriya

ಭಾನುವಾರ, 16 ಮಾರ್ಚ್ 2025 (14:46 IST)
Photo Courtesy X
ಬೆಂಗಳೂರು: ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಸದ್ಯ ಮಗಳ ಜತೆ ಸಮಯ ಕಳೆಯುತ್ತಿದ್ದಾರೆ. ಸೀರಿಯಲ್ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪಾದರ್ಪಣೆ ಮಾಡಿ, ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.

ತಮ್ಮ ಮಾತು ಹಾಗೂ ಸರಳ ಬದುಕಿನ ಮೂಲಕ ಕನ್ನಡಿಗರ ನೆಚ್ಚಿನ ನಟಿಯಾಗಿರುವ ಅದಿತಿ ಅವರು ಯಶಸ್ ಪಾಟ್ಲಾ ಎಂಬವರ ಜತೆ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿ ಈಚೆಗೆ ಹೆಣ್ಣು ಮಗುವನ್ನು ಸ್ವಾಗತಿಸಿದರು.

ಮಗುವಾದ ಬಳಿಕ ಕಲರ್ಸ್ ಕನ್ನಡದ ರಾಜಾ ರಾಣಿ ಶೋನಲ್ಲಿ ಭಾಗವಹಿಸಿದರು. ಅದಲ್ಲದೆ ತಮ್ಮ ಸಿನಿಮಾ ಪ್ರಚಾರಗಳಲ್ಲೂ ಭಾಗವಹಿಸುತ್ತಿದ್ದರು. ಇನ್ನೂ ತನ್ನದೇ ಯೂಟ್ಯೂಬ್ ಚಾನೆಲ್‌ ನಡೆಸುತ್ತಿರುವ ಅದಿತಿ, ತಮ್ಮ ಮಗಳ ಬೆಳವಣಿಗೆ, ಆರೋಗ್ಯ ಸಲಹೆಗಳು ತಮ್ಮ ದಿನಚರಿ ಬಗ್ಗೆ ಹೇಳಿಕೊಳ್ಳುತ್ತಾರೆ.

ಈಚೆಗೆ ಈ ದಂಪತಿ ತಮ್ಮ ಫ್ಯಾಮಿಲಿ ಜತೆಗೆ ತಮ್ಮ ಊರಿಗೆ ತೆರಳಿದ್ದರು. ಅಲ್ಲಿ ಟೆಂಟ್ ಹೌಸ್ ಮಾಡಿ ತಮ್ಮ ಆಸೆಯಂತೆ ಟೀ ಮಾಡಿ ಕುಟುಂಬದ ಜತೆ ಸಮಯ ಕಳೆದಿದ್ದಾರೆ. ಈ ವೇಳೆ ಅದಿತಿ ತಮ್ಮ ಕನಸಿನ ಬಗ್ಗೆ ಹೇಳಿಕೊಂಡರು. ನನಗೆ ಹಳ್ಳಿ ಬದುಕನ್ನು ಎಂಜಾಯ್ ಮಾಡಬೇಕೆಂದು ಆಸೆ. ಆ ದಾರಿಯಲ್ಲೇ ಇದ್ದೀನಿ. ನಿಮ್ಮ ಹಾರೈಕೆಯಿಂದ ಆ ಕನಸು ಆದಷ್ಟು ಬೇಗ ಈಡೇರಲಿ ಎಂದರು.

ಈ ಮೂಲಕ ಹಳ್ಳಿಯಲ್ಲಿ ಮನೆ ಕಟ್ಟಬೇಕೆಂಬ ಕನಸ್ಸನ್ನು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ