ಗಮನ ಸೆಳೆದ ನಟಿ ತಾರಾ ಅನುರಾಧ ಮನೆಯ ಗೆಟ್‌ ಟು ಗೆದರ್ ಪಾರ್ಟಿ

Sampriya

ಶುಕ್ರವಾರ, 17 ಜನವರಿ 2025 (20:16 IST)
Photo Courtesy X
ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಹಿರಿಯ ನಟಿ ತಾರಾ ಅನುರಾಧ ಮನೆಯಲ್ಲಿ ಸಿನಿ ತಾರೆಯರ ಆಗಮನವಾಗಿದೆ. ಇತ್ತಿಚೆಗಷ್ಟೇ ಡಾಕ್ಟರೇಟ್ ಪದವಿ ಪಡೆದ ನಟಿ ತಾರಾ ಅನುರಾಧ ಮನೆಯಲ್ಲಿ ನಡೆದ ಗೆಟ್ ಟು ಗೆದರ್ ಪಾರ್ಟಿ ಸಂಪ್ರದಾಯಬದ್ಧವಾಗಿ ನಡೆದಿದ್ದು ಇದೀಗ ಗಮನ ಸೆಳೆಯುತ್ತಿದೆ.  

ಈಚೆಗೆ ತಾರಾ ಅವರಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 16 ನೇ ಘಟಿಕೋತ್ಸವದಲ್ಲಿ ಸಿನಿಮಾ ರಂಗದಲ್ಲಿ ಸಾಧನೆಗಾಗಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದರು.

ಅದೇ ಸಂಭ್ರಮದಲ್ಲಿರುವ ನಟಿ ತಾರಾ ಸಂಕ್ರಾಂತಿ ಹಬ್ಬದ ದಿನ ಬಿಗ್ ಬಾಸ್ ಮನೆಗೂ ತೆರಳಿ ಅಲ್ಲಿ ಸ್ಪರ್ಧಿಗಳಿಗೆ ಎಳ್ಳು ಬೆಲ್ಲ ನೀಡಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಅದಲ್ಲದೆ ಈಚೆಗೆ ಬಿವೈಡಿ ಸೀಲ್ ಎಲೆಕ್ಟ್ರಿಕ್ ದುಬಾರಿ ಕಾರನ್ನು ಖರೀದಿಸಿದ್ದರು.  ಆ ಸಂಭ್ರಮವನ್ನು ಸಹ ನಟಿ ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡಿದ್ದರು.

ಇದೀಗ ನಟಿಯ ಮನೆಯಲ್ಲಿ ತಾರೆಯರ ಸಮಾಗಮ ನಡೆದಿದ್ದು, ಕನ್ನಡ ಚಿತ್ರರಂಗದ ಹಿರಿಯ, ಕಿರಿಯ ನಟಿಯರೆಲ್ಲಾ ಆಗಮಿಸಿ ಸಂಭ್ರಮಿಸಿದ್ದಾರೆ.

ಈ ಸಮಾರಂಭದಲ್ಲಿ ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಮಾಲ, ಹೇಮಾ ಚೌದರಿ, ಮಾಲಾಶ್ರೀ, ಶ್ರುತಿ, ಮಾಳವಿಕಾ, ಅಶ್ವಿನಿ ಪುನೀತ್ ರಾಜಕುಮಾರ್, ಸುಧಾರಾಣಿ, ಪ್ರಿಯಾಂಕಾ ಉಪೇಂದ್ರ, ಅನುಪ್ರಭಾಕರ್ ಅದಲ್ಲದೆ ಕಿರಿಯ ನಟಿಯರಾದ ಕಾರುಣ್ಯಾ ರಾಮ್, ಭಾವನಾ ರಾವ್, ಪೂಜಾ ಗಾಂಧಿ, ಸೋನು ಗೌಡ, ಸೇರಿ ಕಿರುತೆರೆ, ಹಿರಿತೆರೆಯ ಹಲವು ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.


ನಟಿ ಭಾವನಾ ರಾವ್ ಹಾಗೂ ಸುಧಾರಾಣಿ ಪುತ್ರಿ ನಿಧಿ ನಧೀಂ ಧೀಂ ತನ ಹಾಡಿಗೆ ಅದ್ಭುತವಾಗಿ ಭರತನಾಟ್ಯ ಮಾಡಿದ್ದಾರೆ. ಇವರ ನೃತ್ಯದ ವಿಡಿಯೋವನ್ನು ನಟಿ ಸುಧಾರಾಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ