ಬೆಂಗಳೂರು: ಈಚೆಗೆ ಸಿನಿಮಾ ರಂಗದ ನಟರ ಮೇಲೆ ಆಕ್ರೋಶ ಹೊರಹಾಕಿ 'ನಟ್ಟು ಬೋಲ್ಟು, ಟೈಟು ಮಾಡಕ್ಕೆ ಗೊತ್ತು' ಎಂದು ವಿವಾದ ಸೃಷ್ಟಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, 265 ಸಿನಿಮಾ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ, ಆದರೆ ಸರ್ಕಾರ ಇಲ್ಲದೆ ಸಿನಿಮಾ ಬದುಕೋಕೆ ಸಾಧ್ಯವಾ ಎಂದು ಪ್ರಶ್ನೆ ಮಾಡಿದರು. ಈ ಮೂಲಕ ಮತ್ತೇ ಸಿನಿಮಾ ರಂಗದವರಿಗೆ ಎಚ್ಚರಿಕೆ ನೀಡಿದರು.
ಸಿನಿಮಾ ಫೆಸ್ಟಿವಲ್ ಅದು ಚಿತ್ರರಂಗದವರ ಕಾರ್ಯಕ್ರಮ. ಅವರ ಚಿತ್ರ ಬೆಳೆಲಿ ಅಂತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಅವರ ಸಿನಿಮಾದ ಪ್ರಚಾರ ಅವರು ಮಾಡಬೇಕು. ಅವರ ಕಾರ್ಯಕ್ರಮ. ಟೀಕೆ ಮಾಡಲಿ ಅಂತಾನೇ ಹೇಳಿದ್ದು. ನಮಗೆ ಫಿಲ್ಮ್ ಇಲ್ಲದೆ ಬದುಕುವ ಶಕ್ತಿಯಿದೆ, ಆದರೆ ಅವರಿಗೆ ಸರ್ಕಾರ ಇಲ್ಲದೆ ಆಗಲ್ಲ. ಇದು ರಾಜ್ಯದ ಹಣ, ನೆಲ, ಜಲ, ನಿಮ್ಮ ಭಾಷೆ.
ಈಗ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಮಾಡಿರುವುದು ಅವರ ಚಿತ್ರ ಬೆಳೆಯಲಿ ಎಂದು. ನಾನು ಅವರಿಗೆಷ್ಟು ಸಮಯ ಮಾಡಿದ್ದೇನೆ ಎಂದು ಅವರಿಗೂ ಗೊತ್ತಿದೆ, ನನಗೂ ಗೊತ್ತಿದೆ ಎಂದು ಟೀಕೆಗೆ ತಿರುಗೇಟು ನೀಡಿದರು.