ಆದಿತ್ಯ ಶಶಿಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಕಾದಾಡಿ ಚಿತ್ರದ ಹಾಡು ರಿಲೀಸ್‌

sampriya

ಬುಧವಾರ, 29 ಮೇ 2024 (17:43 IST)
Photo By X
ಬೆಂಗಳೂರು: ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಅಭಿನಯದ ಬಹುನಿರೀಕ್ಷಿತ ಕಾದಾಡಿ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಬಹುಭಾಷೆಯಲ್ಲಿ ತೆರೆಗೆ ಬರಲಿರುವ ಈ ಚಿತ್ರದ ನಾಯಕನನ್ನು ಪರಿಚಯಿಸುವ ಎರಡನೇ ಲಿರಿಕಲ್‌ ವಿಡಿಯೊ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಅಕ್ಷಿತ್ ಶಶಿಕುಮಾರ್ ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಅವರು ನಾಯಕನಟನಾಗಿ ಚೊಚ್ಚಲವಾಗಿ ಅಭಿನಯಿಸಿರುವ ಕಾದಾಡಿ ಚಿತ್ರವು ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿವೆ. ಈ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ.  

ಕಲೆಯು ಇರಬೇಕು, ಮನೆಯು ಇರಬೇಕುʼ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ. ಎನ್.ಮಾರುತಿ ಸಾಹಿತ್ಯ ನೀಡಿದ್ದಾರೆ. ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಹಾಡಿನ ಮೂಲಕ ಮಾಡಿರುವುದು ಗೊತ್ತಾಗುತ್ತದೆ.

ಆದಿತ್ಯಗೆ ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್‌ಮನೋಹರ್, ಶ್ರವಣ್‌ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಡಿ.ಯೋಗಿಪ್ರಸಾದ್ ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‌ ಸೂರಿ ಸೆಟ್ಟಿ, ಪ್ರಕಾಶ್‌ತೋಟ ಸಂಕಲನ, ನೃತ್ಯ ರಾಜ್‌ಪಿಡಿ-ರಾಜ್‌ಕೃಷ್ಣ, ಸಾಹಸ ಸಿನಿಮಾಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ