ಸಾವು ಬದುಕಿನ ಮಧ್ಯೆ ಹೋರಾಡಿದ ಮಲ್ಲಿ, ಈ ವಾರ ಟಿಆರ್‌ಪಿ ಲೆಕ್ಕಾಚಾರ ಉಲ್ಟಾ ಪಲ್ಟಾ

Sampriya

ಶುಕ್ರವಾರ, 4 ಅಕ್ಟೋಬರ್ 2024 (16:39 IST)
Photo Courtesy X
ಕಳೆದ ವಾರದ ಟಿಆರ್‌ಪಿ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿ 'ಅಮೃತಧಾರೆ' ಧಾರಾವಾಹಿ 39ನೇ ವಾರದ ಲಿಸ್ಟ್‌ನಲ್ಲಿ ಕರ್ನಾಟದಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಇದೀಗ ಅಮೃತಧಾರೆ ಸೀರಿಯಲ್ ಆರಂಭವಾಗಿ ವರ್ಷ ಕಳೆದಿದ್ದು, ಶುರುವಿಗೆ ಟಿಆರ್‌ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಕ್ರಮೇಣ ಅಷ್ಟಾಗಿ ಟಿಆರ್‌ಪಿ ಸಿಕ್ಕಿಲ್ಲ. ಇದೀಗ ಮತ್ತೇ ಕಂಬ್ಯಾಕ್ ಮಾಡಿದ ಅಮೃತಧಾರೆ ರಾಜ್ಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಸೀರಿಯಲ್ ಆಗಿ ಹೊರಹೊಮ್ಮುತ್ತಿದೆ.

ನೈಜ ಅಭಿನಯ ಹಾಗೂ ಮನಮುಟ್ಟುವ ಕಥೆಯೊಂದಿಗೆ ಅಮೃತಧಾರೆ ಜನರನ್ನು ಮನಸ್ಸನ್ನು ಗೆಲ್ಲುತ್ತಿದೆ. ಸೀರಿಯಲ್‌ನ ನಾಯಕ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರ ನೈಜ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗಂಡ ಹೆಂಡತಿ ಅಂದರೆ ಹೀಗಿರಬೇಕೆಂದು ಈ ಜೋಡಿನ ಹಾರೈಸುತ್ತಿದ್ದಾರೆ.

ಇನ್ನೂ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಂಬರ್ ಒನ್ ಸೀರಿಯಲ್ ಆಗಿ ಟಿಆರ್‌ಪಿ ಗಿಟ್ಟಿಸಿಕೊಳ್ಳುತ್ತಿತ್ತು. ಆದರೆ ಇದೀಗ ಲಕ್ಷ್ಮೀ ನಿವಾಸ ಹಾಗೂ ಅಮೃತಧಾರೆ ಸೀರಿಯಲ್‌ಗಳು ಅಗ್ರಸ್ಥಾನದಲ್ಲಿದೆ.  ಕಳೆದ ವಾರದ ಟಿಆರ್‌ಪಿ ಲಿಸ್ಟ್‌ನಲ್ಲಿ ಲಕ್ಷ್ಮೀ ನಿವಾಸ ಮೊದಲ ಸ್ಥಾನ ಪಡೆದಿತ್ತು. ಈ ಬಾರಿ ಮೂರನೇ ಸ್ಥಾನವನ್ನು ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಇದೆ.  ನಾಲ್ಕನೇ ಸ್ಥಾನದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇದೆ.

ಇನ್ನೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿ 'ಅಣ್ಣಯ್ಯ' ಧಾರಾವಾಹಿ ಇದೆ.  ಇನ್ನೂ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡದಲ್ಲಿ ಈಚೆಗೆ ಆರಂಭವಾದ ಹೊಸ ಸೀರಿಯಲ್‌ಗಳು ಅಂದುಕೊಂಡಷ್ಟು ಟಿಆರ್‌ಪಿ ಪಡೆದುಕೊಳ್ಳುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ