ನಿಖಿಲ್ ಕುಮಾರಸ್ವಾಮಿ ‘ರೈಡರ್’ ಚಿತ್ರತಂಡದ ಸದಸ್ಯರಿಗೂ ಕೊರೋನಾ

ಮಂಗಳವಾರ, 20 ಏಪ್ರಿಲ್ 2021 (09:55 IST)
ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಬಳಿಕ ಅವರು ನಟಿಸುತ್ತಿರುವ ರೈಡರ್ ಸಿನಿಮಾ ತಂಡದ ಅನೇಕರಲ್ಲಿ ಕೊರೋನಾ ಕಾಣಿಸಿಕೊಂಡಿದೆ.


ಇತ್ತೀಚೆಗಷ್ಟೇ ನಿಖಿಲ್ ರೈಡರ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರ ಜೊತೆಗೆ ಕೆಲಸ ಮಾಡಿದ್ದ ಚಿತ್ರತಂಡದ ಹಲವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಸುದ್ದಿ ಬಂದಿದೆ.

ನಿಖಿಲ್ ಕುಮಾರಸ್ವಾಮಿಗೆ ಎರಡು ದಿನಗಳ ಮೊದಲು ಕೊರೋನಾ ಕಾಣಿಸಿಕೊಂಡಿತ್ತು. ಇದಾದ ಬಳಿಕ ಅವರು ಹೋಂ ಕ್ವಾರಂಟೈನ್ ಗೊಳಗಾಗಿದ್ದರು. ನನ್ನ ಸಂಪರ್ಕಕ್ಕೆ ಬಂದವರೆಲ್ಲಾ ಕೊರೋನಾ ಪರೀಕ್ಷೆಗೊಳಗಾಗಿ ಎಂದು ಅವರು ಮನವಿ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ