ಲಾಕ್ ಡೌನ್ ಆದ್ರೆ ನಾವೇನು ಮಾಡ್ಬೇಕು? ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೆಟ್ಟಿಗರ ಕಿಡಿ

ಮಂಗಳವಾರ, 20 ಏಪ್ರಿಲ್ 2021 (09:12 IST)
ಬೆಂಗಳೂರು: ಕೊರೋನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಜನರು ಲಾಕ್ ಡೌನ್ ಭೀತಿಯಲ್ಲಿದ್ದಾರೆ. ಒಂದು ವೇಳೆ ಲಾಕ್ ಡೌನ್ ಮಾಡುವುದಾಗಿ ಸರ್ಕಾರ ಮುನ್ಸೂಚನೆ ಕೊಟ್ಟರೂ ತಮ್ಮ ತಮ್ಮ ಊರಿಗೆ ಹೋಗಲು ಸರ್ಕಾರಿ ಬಸ್ ಗಳೇ ಇಲ್ಲ ಎಂಬ ಸ್ಥಿತಿ ಆಗಿದೆ.

 

ಹೀಗಾಗಿ ಸಾರಿಗೆ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಕಿಡಿ ಕಾರುತ್ತಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನೀವು ಹೀಗೇ ಮುಷ್ಕರ ಮಾಡುತ್ತಿದ್ದರೆ ಲಾಕ್ ಡೌನ್ ಆದಾಗ ನಾವು ಊರಿಗೆ ತೆರಳೋದು ಹೇಗೆ? ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ಕೆಲವರು ಕೆಎಸ್ ಆರ್ ಟಿಸಿ, ಬಿಎಂಟಿಸಿ ನೌಕರರು ಹಸಿರು ಶಾಲು ಹಾಕಿರುವ ಇವರ ಮಾತು ಕೇಳಿಕೊಂಡು ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವರು ಇವರ ಮುಷ್ಕರದಿಂದ ಜನರು ಓಡಾಡುವುದು ಕಡಿಮೆಯಾಗಿ ಪರೋಕ್ಷವಾಗಿ ಕೊರೋನಾ ಪ್ರಕರಣ ಕಡಿಮೆಯಾಗಲು ಸಹಾಯವಾಗಬಹುದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ