ಇತ್ತೀಚೆಗಷ್ಟೇ ಚಿತ್ರಕಥಾ ಚಿತ್ರತಂ ಪೋಸ್ಟರ್ಗಳ ಮೂಲಕವೇ ಈ ಸಿನಿಮಾದಲ್ಲಿರೋ ಕ್ಯಾರೆಕ್ಟರುಗಳು ಮಾಮೂಲಿಯವಲ್ಲ ಎಂಬಂಥಾ ಸ್ಪಷ್ಟ ಸಂದೇಶವೊಂದನ್ನು ಪ್ರೇಕ್ಷಕರ ವಲಯಕ್ಕೆ ರವಾನಿಸಿತ್ತು. ಆ ನಂತರದಲ್ಲಿ ಈ ಸಿನಿಮಾದ ಕಥಾಹಂದರದ ಬಗ್ಗೆ ಮತ್ತು ತಾರಾಗಣದ ಬಗ್ಗೆ ಒಂದೊಂದೇ ಮಾಹಿತಿಗಳನ್ನು ಜಾಹೀರು ಮಾಡುತ್ತಾ ಸಾಗಿ ಬಂದ ಚಿತ್ರತಂಡ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ವಾರವೇ ಚಿತ್ರಕಥಾ ತೆರೆ ಕಾಣಲಿದೆ.
ಯಶಸ್ವಿ ಬಾಲಾದಿತ್ಯ ನಿರ್ದೇಶನದ ಈ ಚಿತ್ರ ವನ್ನು ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿದ್ದಾರೆ. ಈ ಮೂಲಕವೇ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಸುಜಿತ್ ರಾಥೋಡ್ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪ್ರತೀ ಪಾತ್ರಗಳನ್ನೂ ಆಸ್ಥೆಯಿಂದ, ವಿಶೇಷವಾಗಿ ರೂಪಿಸಿರೋ ಯಶಸ್ವಿ, ನಾಯಕನ ಪಾತ್ರವನ್ನೂ ಕೂಡಾ ಅಂಥಾದ್ದೇ ಸೊಗಸಿನೊಂದಿಗೆ ರೂಪಿಸಿದ್ದಾರಂತೆ.
ಈ ಸಿನಿಮಾ ಮೂಲಕವೇ ಅಗ್ನಿಸಾಕ್ಷಿ ಸೀರಿಯಲ್ನ ಚಂದ್ರಿಕಾ ಖ್ಯಾತಿಯ ಅನುಷಾ ರಾವ್ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಎಂಬ ಘಾಟಿ ಪಾತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ಚಂದ್ರಿಕಾ, ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ದಿಲೀಪ್ ರಾಜ್ಗೆ ಜೋಡಿಯಾಗಿ ನಟಿಸಿದ್ದಾರೆ. ಆದರೆ ಅವರಿಲ್ಲಿ ರಾಧಿಕಾಳಂಥಾ ರಗಡ್ ಪಾತ್ರವನ್ನೇ ನಿರ್ವಹಿಸಿದ್ದಾರಾ ಅಥವಾ ಬೇರೆ ಥರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಕುತೂಹಲ ಇದ್ದೇ ಇದೆ. ಒಟ್ಟಾರೆಯಾಗಿ ಅಗ್ನಿಸಾಕ್ಷಿ ಪಾತ್ರದ ಮೂಲಕ ಭಾರೀ ಕ್ರೇಜ್ ಹುಟ್ಟು ಹಾಕಿರೋ ಅನುಷಾ ರಾವ್ ಪಾತ್ರ ಕೂಡಾ ಈ ಚಿತ್ರದ ಪ್ರಧಾನ ಆಕರ್ಷಣೆ.