ದಿಗಂತ್ ಜತೆ ಮದುವೆ ಸುದ್ದಿಗೆ ಐಂದ್ರಿತಾ ಹೇಳಿದ್ದೇನು ಗೊತ್ತಾ?

ಭಾನುವಾರ, 29 ಅಕ್ಟೋಬರ್ 2017 (07:45 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಹಸೆಮಣೆಗೇರಲಿದೆ ಎಂಬ ಸುದ್ದಿ ನಿನ್ನೆ ಹರಿದಾಡುತ್ತಿತ್ತು. ದಿಗಂತ್ ಮತ್ತು ಐಂದ್ರಿತಾ ಲವ್ ಮಾಡುತ್ತಿದ್ದಾರೆಂಬ ಸುದ್ದಿಗೆ ಐಂದ್ರಿತಾ ಪ್ರತಿಕ್ರಿಯಿಸಿದ್ದಾರೆ.

 
ಈ ಜೋಡಿ ಮುಂದಿನ ವರ್ಷದ ಅಂತ್ಯಕ್ಕೆ ಹಸೆಮಣೆ ಏರಲಿದೆ ಎಂಬ ಸುದ್ದಿಗೆ ಐಂದ್ರಿತಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಇದೊಂದು ಸುಳ್ಳು ಸುದ್ದಿ. ನಾವಿಬ್ಬರೂ ಮದುವೆಯಾಗುತ್ತಿದ್ದೇವೆ ಎಂಬ ಸುದ್ದಿ ಸುಳ್ಳು ಎಂದು ಐಂದ್ರಿತಾ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಇವರಿಬ್ಬರು ರಿಯಲ್ ಲೈಫ್ ನಲ್ಲೂ ಜೋಡಿಯಾಗುತ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ