ಕಾಂತಾರ ಚಾಪ್ಟರ್ 1 ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ

Krishnaveni K

ಶುಕ್ರವಾರ, 3 ಅಕ್ಟೋಬರ್ 2025 (09:58 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಮೊದಲ ದಿನವೇ ಚಿತ್ರ ಗಳಿಕೆಯಲ್ಲಿ ದಾಖಲೆಯನ್ನೇ ಮಾಡಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

ಕಾಂತಾರ ಚಾಪ್ಟರ್ 1 ಕೇವಲ ಭಾರತ ಮಾತ್ರವಲ್ಲ, ದುಬೈ, ಅಮೆರಿಕಾ, ಲಂಡನ್ ಸೇರಿದಂತೆ ವಿಶ್ವದಾದ್ಯಂತ ನಿನ್ನೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪ್ರೀಮಿಯರ್ ಶೋನಿಂದ ಹಿಡಿದು ಈಗಲೂ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಮೊದಲ ದಿನವೇ ಕನ್ನಡದಲ್ಲೇ 25 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ವಿಶ್ವದಾದ್ಯಂತ ಒಟ್ಟಾರೆಯಾಗಿ ನೋಡುವುದಾದರೆ 100 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ.

ಪ್ರೀಮಿಯರ್ ಶೋನಲ್ಲೇ ಕಾಂತಾರ ದಾಖಲೆ ಮಾಡಿದೆ. 100 ಕ್ಕೂ ಹೆಚ್ಚು ಪ್ರೀಮಿಯರ್ ಶೋ ಹೊಸ ದಾಖಲೆಯೇ ಆಗಿದೆ. ಕಲೆಕ್ಷನ್  ವಿಚಾರಕ್ಕೆ ಬಂದರೆ ಈಗ ಜನರು ತೋರುತ್ತಿರುವ ಪ್ರತಿಕ್ರಿಯೆ ನೋಡಿದಾಗ ಸುಲಭವಾಗಿ 1000 ಕೋಟಿ ಕ್ಲಬ್ ಸೇರಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ