ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾದ ಪಾತ್ರವರ್ಗದ ಬಗ್ಗೆ ದಿನಕ್ಕೊಂದು ರೂಮರ್ ಗಳು ಕೇಳಿಬರುತ್ತಲೇ ಇದೆ. ಇದೀಗ ಬಚ್ಚನ್ ಸೊಸೆ ಐಶ್ವರ್ಯಾ ರೈ ಹೆಸರು ಕೇಳಿಬರುತ್ತಿದೆ.
ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ ಸಹೋದರಿಯ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅದು ಸುಳ್ಳಾಯಿತು. ತೀರಾ ಇತ್ತೀಚೆಗೆ ನಯನತಾರಾ ಹೆಸರು ಕೇಳಿಬರುತ್ತಿತ್ತು. ಇದೀಗ ಮೂಲತಃ ಮಂಗಳೂರಿನವರೇ ಆದ ಮಾಜಿ ಭುವನ ಸುಂದರಿ, ಬಚ್ಚನ್ ಮನೆ ಸೊಸೆ, ಎವರ್ ಗ್ರೀನ್ ಐಶ್ವರ್ಯಾ ರೈ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಈ ಕಾರಣಕ್ಕೆ ದೊಡ್ಡ ಸ್ಟಾರ್ ನಟಿಯನ್ನೇ ಈ ಪಾತ್ರಕ್ಕೆ ಹಾಕಿಕೊಳ್ಳಲು ಚಿತ್ರತಂಡ ಪ್ರಯತ್ನ ನಡೆಸಿದೆ. ಅದಕ್ಕಾಗಿ ಈಗ ಕರೀನಾ, ನಯನತಾರಾ ಬಳಿಕ ಐಶ್ವರ್ಯಾ ರೈ ಬಚ್ಚನ್ ಹೆಸರು ಕೇಳಿಬರುತ್ತಿದೆ.
ಯಶ್ ಸಹೋದರಿ ಪಾತ್ರದಲ್ಲಿ ನಟಿಸಲು ಚಿತ್ರತಂಡ ಐಶ್ವರ್ಯಾ ಅವರನ್ನು ಸಂಪರ್ಕಿಸಿದೆಯಂತೆ. ಇದನ್ನು ಐಶ್ವರ್ಯಾ ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಐಶ್ವರ್ಯಾ ಈ ಹಿಂದೆ ಕನ್ನಡ ನಾಡಿಗೆ ಬಂದಿದ್ದಾಗ ಕನ್ನಡದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ನಟಿಸುತ್ತೇನೆ ಎಂದಿದ್ದರು. ಇದೀಗ ಟಾಕ್ಸಿಕ್ ಸಿನಿಮಾ ಒಪ್ಪಿಕೊಂಡರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದಂತಾಗುತ್ತದೆ.