ಚಿರಂಜೀವಿ ಜೊತೆ ನಟಿಸಲು ದುಬಾರಿ ಸಂಭಾವನೆ ಕೇಳಿದ ಐಶ್..?

ಬುಧವಾರ, 28 ಜೂನ್ 2017 (13:14 IST)
ಬಾಹುಬಲಿ ಚಿತ್ರದಲ್ಲಿ ನಟಿಸಲು ನಟಿ ಶ್ರೀದೇವಿ 10 ಕೋಟಿ ಬೇಡಿಕೆ ಇಟ್ಟಿದ್ದರಂತೆ ಎಂಬ ವದಂತಿಗಳು ಹರದಾಡುತ್ತಿರುವ ಬೆನ್ನಲ್ಲೇ ಮಾಜಿ ವಿಶ್ವಸುದಂರಿ ಐಶ್ವರ್ಯ ರೈ ಸಹ ಭಾರೀ ಸಂಭಾವನೆಗೆ ಬೇಡಿಕೆ ಇಟ್ಟಿರುವ ಬಗ್ಗೆ ವರದಿಯಾಗಿದೆ.

ಇಡೀ ವಿಶ್ವಾದ್ಯಂತ ಖ್ಯಾತರಾಗಿರುವ ಐಶ್ವರ್ಯ ರೈ ದುಬಾರಿ ಸಂಭಾವನೆ ಪಡೆಯುವ ಕೆಲವೇ ಕೆಲವು ಬಾಲಿವುಡ್ ನಟಿಯರಲ್ಲಿ ಒಬ್ಬರು. ರೋಬೋ ಸಿನಿಮಾದಲ್ಲಿ ತನ್ನ ಭಿನ್ನಾಣದ ಮೂಲಕ ಕಮಾಲ್ ಮಾಡಿದ್ದ ಐಶ್ವರ್ಯ ರೈ ಅವರನ್ನ ಮೆಗಾಸ್ಟಾರ್ ಚಿರಂಜೀವಿಯವರ ಮುಂದಿನ ಚಿತ್ರ ಉಯ್ಯಾಲವಾಡ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸುವಂತೆ ರಾಮ್ ಚರಣ್ ಆಹ್ವಾನ ನೀಡಿದ್ದು, ಐಶ್ವರ್ಯ ರೈ 9 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಆದರೆ, ರಾಮ್ ಚರಣ್ ಅಷ್ಟು ಮೊತ್ತದ ಸಂಭಾವನೆ ಕೊಡಲು ಒಪ್ಪಿದ್ದಾರಾ ಎಂಬ ಕುರಿತಾದ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ರಜಿನಿಕಾಂತ್ ಜೊತೆ ರೋಬೋಟ್ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯ ರೈ 6 ಕೋಟಿ ರೂ. ಸಂಭಾವನೆ ಪಡೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ