12 ವರ್ಷದ ಆರಾಧ್ಯ ಬಚ್ಚನ್ ಬುದ್ಧಿವಂತಿಕೆಗೆ ಮನಸೋತ ಶ್ವೇತಾ ಬಚ್ಚನ್ ಮಗಳು ನವ್ಯಾ

Sampriya

ಬುಧವಾರ, 17 ಏಪ್ರಿಲ್ 2024 (16:36 IST)
photo Courtesy Instagram
ಮುಂಬೈ: ಬಿಗ್‌ಬಿ ಅಮಿತಾ ಬಚ್ಚನ್ ಅವರ ಮೊಮ್ಮಗಳು  'ವಾಟ್ ದಿ ಹೆಲ್ ನವ್ಯಾ' ಎಂಬ ಪಾಡ್‌ಕಾಸ್ಟ್‌ ಮುಖಾಂತರ ತುಂಬಾನೇ ಜನಪ್ರಿಯರಾಗಿದ್ದಾರೆ.  

ಈ ಪಾಡ್‌ಕಾಸ್ಟ್‌ನಲ್ಲಿ ತಾಯಿ ಶ್ವೇತಾ ಬಚ್ಚನ್ ಮತ್ತು ಅಜ್ಜಿ ಜಯಾ ಬಚ್ಚನ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಸಂವಾದಿಸುತ್ತಾರೆ. ಇನ್ನು ಈ ಪಾಡ್‌ಕಾಸ್ಟ್‌ನಲ್ಲಿ ಅತ್ತೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಭಾಗವಹಿಸುವ ಬಗ್ಗೆ ಸುದ್ದಿಯಾಗಿತ್ತು.

ಈಚೆಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನವ್ಯಾ ಅವರು ತನ್ನ ಮಾವನ ಮಗಳು ಆರಾಧ್ಯ ಬಚ್ಚನ್ ಅನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನದ ವೇಳೆ ನವ್ಯಾಗೆ  12 ವರ್ಷದ ಆರಾಧ್ಯಗೆ ಒಂದು ಸಲಹೆಯನ್ನು ನೀಡಲು ಕೇಳಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಅವರು ವಯಸ್ಸಿನ ಹೊರತಾಗಿಯೂ ಆರಾಧ್ಯ ಅವರು 12 ನೇ ವಯಸ್ಸಿನಲ್ಲಿದ್ದಕ್ಕಿಂತ ಹೆಚ್ಚು ಬುದ್ಧಿವಂತರಾಗಿದ್ದಾರೆ ಮತ್ತು ಆಕೆಗೆ ಯಾವುದೇ ಜೀವನ ಪಾಠವನ್ನು ನೀಡುವ ಅಗತ್ಯವಿಲ್ಲ. ಈ ದಿನಗಳಲ್ಲಿ ಯುವಕರು ತಮ್ಮ ಹಿರಿಯರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದಾರೆ ಮತ್ತು ಜಗತ್ತನ್ನು ಒಳ್ಳೆಯದಕ್ಕಾಗಿ ಬದಲಾಯಿಸುವ ಅವರ ಮಹತ್ವಾಕಾಂಕ್ಷೆಗಳನ್ನು ಶ್ಲಾಘಿಸಿದರು.

ನವ್ಯಾ ಕೂಡ ಆರಾಧ್ಯ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಆಕೆಯನ್ನು ಹೊಗಳುತ್ತಾ, ಆರಾಧ್ಯ ಸಾಧಿಸುವ ಕೆಲಸಗಳನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದು ಹೇಳಿದರು.

"ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವಳಿಗೆ ಹಲವು ವಿಷಯಗಳ ಬಗ್ಗೆ ತಿಳಿದಿರುತ್ತಾಳೆ ಮತ್ತು ಅವಳು ತುಂಬಾ ಬುದ್ಧಿವಂತಳು. ನನಗೆ ಹಲವು ವಿಷಯಗಳನ್ನು ಹಂಚಿಕೊಳ್ಳಲು ಮನೆಯಲ್ಲಿ ಒಬ್ಬ ತಂಗಿ ಇರುವುದು ತುಂಬಾ ಸಂತೋಷವಾಗಿದೆ ಆದರೆ ನಾನು ಅವಳಿಗೆ ಸಲಹೆಯನ್ನು ನೀಡಬಹುದೆಂದು ನಾನು ಭಾವಿಸುವುದಿಲ್ಲ, ಅವಳು ತುಂಬಾ ಭರವಸೆ, ಆತ್ಮವಿಶ್ವಾಸ ಮತ್ತು ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಾಕಷ್ಟು ಅರಿವು ಹೊಂದಿದ್ದಾಳೆ ಆದ್ದರಿಂದ ಇದು ತುಂಬಾ ಶ್ಲಾಘನೀಯ ವಿಷಯ ಎಂದು ನಾನು ಭಾವಿಸುತ್ತೇನೆ.

ಪ್ರಸ್ತುತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿರುವ ಆರಾಧ್ಯ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ