ನಮ್ಮ ಭಾಷೆಯ ಹಾಡನ್ನು ನಾವೇ ಬಳಸುವುದು ಅಪರಾಧವೇ: ರಕ್ಷಿತ್ ಶೆಟ್ಟಿ

Sampriya

ಶುಕ್ರವಾರ, 2 ಆಗಸ್ಟ್ 2024 (15:23 IST)
Photo Courtesy X
ಬೆಂಗಳೂರು: ಕಾಪಿರೈಟ್ ಉಲ್ಲಂಘನೆ ಆರೋಪ ಎದುರಿಸುತ್ತಿರುವ ನಟ ರಕ್ಷಿತ್ ಶೆಟ್ಟಿ ಅವರು ಇಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.

ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಚಲನಚಿತ್ರ ಬ್ಯಾಚುಲರ್ ಪಾರ್ಟಿಯುಲ್ಲಿ ಅನುಮತಿಯಿಲ್ಲದೆ  ಸಂಗೀತ ಸಂಸ್ಥೆಯ ಹಾಡುಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ನ ಪಾಲುದಾರ ನವೀನ್ ಕುಮಾರ್ ದೂರು ನೀಡಿದ್ದರು. ಈ ಸಂಬಂಧ ರಕ್ಷಿತ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇಂದು ಪೊಲೀಸ್ ವಿಚಾರಣೆ ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ಈ ಪ್ರಕರಣ ಸಂಬಂಧ ಕೋರ್ಟ್‌ನಲ್ಲಿ ಫೈಟ್ ಮಾಡುತ್ತೇನೆ. ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ. ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ. ಹಾಡುಗಳನ್ನು ಬಳಸಲು ಅನುಮತಿ ಕೋರಿ  ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ದೂರು ದಾಖಲಿಸಿದ್ದಾರೆ.

ಇದು ಕಾಪಿರೈಟ್ ಉಲ್ಲಂಘಟನೆ ಅಲ್ಲ. ಕನ್ನಡ ಭಾಷೆಯ ಹಾಡುಗಳನ್ನು ಕನ್ನಡದಲ್ಲಿಯೇ ಬಳಸುವಂತೆ ಇಲ್ಲವೇ. ಈ ಪ್ರಕರಣ ಸಂಬಂಧ ಕೋರ್ಟ್‌ನಲ್ಲಿ ಹೋರಾಡುತ್ತೇನೆ. ನ್ಯಾಯಾಲಯದ ತೀರ್ಪಿನಂತೆ ಮುಂದಿನ ದಿನಗಳಲ್ಲಿ ಯಾವುದು ಬಳಸಬೇಖು, ಯಾವುದು ಬಳಸಬಾರದು ಎಂಬುದು ಗೊತ್ತಾಗುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ