ಬೆಂಗಳೂರು: 777 ಚಾರ್ಲಿ ಸಿನಿಮಾದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮನಸ್ಸನ್ನು ಕದ್ದ 'ಚಾರ್ಲಿ' ಗುಡ್ ನ್ಯೂಸ್ ಕೊಟ್ಟಿರುವ ಬಗ್ಗೆ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.
ದಿಢೀರನೆ ಲೈವ್ಗೆ ಬಂದ ರಕ್ಷಿತ್ ಶೆಟ್ಟಿ ಅವರು, ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅದಲ್ಲದೆ ಚಾರ್ಲಿ ಹಾಗೂ ಆಕೆಯ ಮರಿಗಳನ್ನು ನೋಡುವ ಸಲುವಾಗಿ ಮೈಸೂರಿಗೆ ಬಂದಿದ್ದೇನೆ ಎಂದಿದ್ದಾರೆ.
ಲೈವ್ನಲ್ಲಿ ರಕ್ಷಿತ್ ಶೆಟ್ಟಿ ಮಾತನಾಡಿ, ಇದೊಂದು ಸರ್ಪ್ರೈಸ್ ಲೈವ್, ಕಾರಣ ಏನೆಂದರೆ 777 ಚಾರ್ಲಿ ರಿಲೀಶ್ ಆಗಿ 2 ವರ್ಷ ಆಗ್ತಾ ಬಂತು. ನಮಗೆ ಸಿನಿಮಾ ಬಿಡುಗಡೆ ಆದ ದಿನದಿಂದಲೂ ಚಾರ್ಲಿ ತಾಯಿಯಾಗಬೇಕೆಂಬುದಿತ್ತು. ಚಾರ್ಲಿಗೆ ಮರಿಗಳಾದರೆ ಈ ಸಿನಿಮಾ ಕಂಪ್ಲೀಟ್ ಆದ ಹಾಗೇ ಎಂದು ಹೇಳುತ್ತಿದ್ದೇವು. ಇದೀಗ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಆಕೆಯನ್ನು ಹಾಗೂ ಮರಿಗಳನ್ನು ನೋಡುವ ಸಲುವಾಗಿ ಇಂದು ಮೈಸೂರಿಗೆ ಬಂದಿದ್ದೇನೆ ಎಂದರು.
ಈಗಾ ಚಾರ್ಲಿ 6 ಮಕ್ಕಳ ತಾಯಿ. 5 ಹೆಣ್ಣು, 1 ಗಂಡು ನಾಯಿ ಮರಿಗೆ ಚಾರ್ಲಿ ಜನ್ಮ ನೀಡಿದ್ದಾಳೆ. ಈ ಮೂಲಕ 777 ಚಾರ್ಲಿ ಸಂಪೂರ್ಣವಾಗಿದೆ ಎಂದರು.
ಕೆಲಹೊತ್ತು ಚಾರ್ಲಿ ಜತೆ ಸಮಯ ಕಳೆದ ರಕ್ಷಿತ್ ಅವರು ಅದರ ಫೋಟೋ ತೆಗೆದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೆಟಿಜನ್ಗಳು ಚಾರ್ಲಿ ಪತಿ ಎಲ್ಲಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ ಮತ್ತು ಇನ್ನೊಬ್ಬರು ಆ ನಾಯಿಮರಿಗಳಿಗೆ ತಮ್ಮ ತಾಯಿ ನಟಿ ಎಂದು ತಿಳಿದಿಲ್ಲ ಎಂದು ಕೇಳಿದರು