ಬೆಂಗಳೂರು: ಊರೆಲ್ಲಾ ಸುತ್ತಿ ಪುಷ್ಪ 2 ಸಿನಿಮಾ ಪ್ರಚಾರ ಮಾಡಿದ್ದ ನಾಯಕ ಅಲ್ಲು ಅರ್ಜುನ್ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಮಾತ್ರ ಬರಲೇ ಇಲ್ಲ. ಇದಕ್ಕೆ ವಿತರಕ ಲಕ್ಷ್ಮೀಕಾಂತ್ ಸಮಜಾಯಿಷಿ ನೀಡಿದ್ದಾರೆ.
ಹೈದರಾಬಾದ್ ಅಲ್ಲದೆ, ಕೇರಳ, ತಮಿಳುನಾಡು, ಮುಂಬೈಗೆ ಹೋಗಿ ದೊಡ್ಡ ಈವೆಂಟ್ ಮಾಡಿ ಪುಷ್ಪ 2 ಸಿನಿಮಾ ಪ್ರಮೋಷನ್ ಮಾಡಲಾಗಿತ್ತು. ಈ ಪ್ರಮೋಷನ್ ಗೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹೋಗಿ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಇವರು ಕರ್ನಾಟಕಕ್ಕೆ ತಪ್ಪಿಯೂ ಕಾಲಿಟ್ಟಿಲ್ಲ.