ಕೆಜಿಎಫ್ 2 ವೀಕ್ಷಿಸಿದ ಅಲ್ಲು ಅರ್ಜುನ್ ಹೇಳಿದ್ದೇನು?
ಕೆಜಿಎಫ್ 2 ವೀಕ್ಷಿಸಿದ ಅಲ್ಲು ಅರ್ಜುನ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅಲ್ಲು ಅರ್ಜುನ್ ಪ್ರಶಾಂತ್ ನೀಲ್ ತಮ್ಮ ಕನಸನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಈ ಪ್ರಯತ್ನದಿಂದ ಭಾರತೀಯ ಸಿನಿಮಾದ ಕೀರ್ತಿ ಮತ್ತಷ್ಟು ಹೆಚ್ಚಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಹಿನ್ನಲೆ ಸಂಗೀತವೂ ಅದ್ಭುತವಾಗಿದೆ. ಎಲ್ಲಾ ತಂತ್ರಜ್ಞರಿಗೂ ನನ್ನ ಗೌರವ ಎಂದು ಅಲ್ಲು ಅರ್ಜುನ್ ಹೊಗಳಿದ್ದಾರೆ.