ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

Sampriya

ಶನಿವಾರ, 16 ಆಗಸ್ಟ್ 2025 (19:31 IST)
ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಜಾಮೀನು ಅರ್ಜಿ ವಜಾ ಹಿನ್ನೆಲೆ ಮತ್ತೇ ಜೈಲು ಸೇರಿರುವ ನಟ ದರ್ಶನ್ ಅವರ ಜೈಲಿನಲ್ಲಿನ ಮೊದಲ ಲುಕ್ ಇದೀಗ ರಿವೀಲ್ ಆಗಿದೆ. 

ಮಾಡೆಲ್, ನಟಿ ಪವಿತ್ರಾ ಗೌಡ ಹಾಗೂ ದರ್ಶನ್ ಅವರ ಪ್ರಾಥಮಿಕ ವರದಿ ದಾಖಲಾತಿ ವೇಳೆ ತೆಗೆದ ಫೋಟೋ ಇದೀಗ ಹೊರಬಿದ್ದಿದೆ. ಅದರಲ್ಲಿ ದರ್ಶನ್ ಸಪ್ಪೆ ಮುಖ ಮಾಡಿ, ಕ್ಯಾಮಾರೆಗೆ ಲುಕ್ ಕೊಟ್ಟಿದ್ದಾರೆ. 

ದೇವಸ್ಥಾನದ ಭೇಟಿಯ ವೇಳೆ ಮುಡಿ ನೀಡಿದ್ದ ದರ್ಶನ್‌, ಅರೆಸ್ಟ್ ವೇಳೆ ಟೋಪಿ ಹಾಗೂ ಮುಖಕ್ಕೆ ಮಾಸ್ಕ್‌ ಅನ್ನು ಧರಿಸಿದ್ದರು. ಇದೀಗ ದರ್ಶನ್ ಅವರ ಲುಕ್‌ನಲ್ಲಿ ತುಂಬಾನೆ ಟೆನ್ಷನ್ ಎದ್ದು ಕಾಣುತ್ತಿದೆ.
Photo Credit X


ಆದರೆ ಪವಿತ್ರಾ ಗೌಡ ಮಾತ್ರ ನಗುಬೀರಿ ಫೋಟೋಗೆ ಫೋಸ್ ನೀಡಿದ್ದಾಳೆ.  

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಎರಡನೇ ಭಾರೀ ದರ್ಶನ್ ಸೇರಿದಂತೆ 7ಮಂದಿ ಆರೋಪಿಗಳು ಆರೆಸ್ಟ್ ಆಗಿದ್ದಾರೆ. 

ದರ್ಶನ್ ತೂಗುದೀಪ ಮತ್ತು ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರತ್ಯೇಕ ಕೊಠಡಿಗಳಲ್ಲಿ ಅಡ್ಮಿಷನ್ ಬ್ಯಾರಕ್‌ನಲ್ಲಿ ಇರಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ