ನಟಿ ಅಮಲಾ ಪೌಲ್ ಗುಟ್ಟು ಗುಟ್ಟು ಮದುವೆ

ಶನಿವಾರ, 21 ಮಾರ್ಚ್ 2020 (09:17 IST)
ಮುಂಬೈ: ಬಹುಭಾಷಾ ನಟಿ ಅಮಲಾ ಪೌಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ವಿವಾಹವನ್ನು ಅವರು ರಹಸ್ಯವಾಗಿಟ್ಟಿದ್ದಾರೆ.


ಮುಂಬೈ ಮೂಲದ ಗಾಯಕ ಭುವಿಂದರ್ ಸಿಂಗ್ ಜತೆ ಅಮಲಾ ವಿವಾಹವಾಗಿದ್ದಾರೆ ಎನ್ನಲಾಗಿದೆ. ತಮ್ಮ ವಿವಾಹದ ಫೋಟೋಗಳನ್ನು ಭುವಿಂದರ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.

ಇದು ವೈರಲ್ ಆಗುತ್ತಿದ್ದಂತೇ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಅಮಲಾ ಎಎಲ್ ವಿಜಯ್ ಜತೆಗೆ ವಿವಾಹವಾಗಿ ವಿಚ್ಛೇದನ ಪಡೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ