ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಮೃತಾ: ಡಿ ಅಂದ್ರೆ ಡಾರ್ಲಿಂಗಾ ಅಂದ ಫ್ಯಾನ್ಸ್!
ನಿಮಗೆಲ್ಲಾ ಗೊತ್ತೇ ಇರುವ ಹಾಗೆ ಡಾಲಿ ಮತ್ತು ಅಮೃತಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎನ್ನುವುದು ಅಭಿಮಾನಿಗಳ ಗುಮಾನಿ. ಇದೀಗ ಅಮೃತಾ ಹ್ಯಾಪೀ ಬರ್ತ್ ಡೇ ಡಿ ಎಂದು ಲವ್ ಇಮೋಜಿ ಸಮೇತ ವಿಶ್ ಮಾಡಿದ್ದು ನೋಡಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಡಿ ಎಂದರೆ ಡಾಲಿ ಅಂತಾನಾ ಡಾರ್ಲಿಂಗ್ ಅಂತಾನಾ ಎಂದು ನೆಟ್ಟಿಗರು ಅಮೃತಾ ಕಾಲೆಳೆದಿದ್ದಾರೆ. ಕೆಲವರು ನೀವಿಬ್ಬರೂ ಒಳ್ಳೆ ಜೋಡಿ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ.