ಕಾವೇರಿ ಕ್ರೂರತೆ ಕಂಡು ಶಾಕ್ ಆದ ಲಕ್ಷ್ಮಿ, ಬಯಲಾಗುತ್ತಾ ಕೀರ್ತಿ ಸಾವಿನ ರಹಸ್ಯ

Sampriya

ಸೋಮವಾರ, 30 ಸೆಪ್ಟಂಬರ್ 2024 (19:02 IST)
Photo Courtesy X
ಬೆಂಗಳೂರು: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿರುವ 'ಲಕ್ಷ್ಮೀ ಬಾರಮ್ಮ' ಥ್ರಿಲ್ಲಿಂಗ್ ಸ್ಟೋರಿಯೊಂದಿಗೆ ವೀಕ್ಷಕರ ಮನಸ್ಸು ಗೆಲ್ಲುತ್ತಿದೆ. ಕೀರ್ತಿ ಹಾಗೂ ಲಕ್ಷ್ಮಿಯ ಅದ್ಭುತ ಅಭಿನಯಕ್ಕೆ ಸೀರಿಯಲ್ ಪ್ರಿಯರು ಫಿದಾ ಆಗಿದ್ದು, ಕೀರ್ತಿ ಸಾವಿನ ರಹಸ್ಯವನ್ನು ಭೇದಿಸಲು ಲಕ್ಷ್ಮಿ ಹೊರಟಿದ್ದಾಳೆ.

ಅತ್ತ ಕೀರ್ತಿಯನ್ನು ಬೆಟ್ಟದ ಮೇಲಿಂದ್ದ ತಳ್ಳಿ ಸಾವಿನ ದವಡೆಗೆ ನೂಕಿರುವ ಕಾವೇರಿ ತಾನೇನು ತಪ್ಪು ಮಾಡಿಯೇ ಇಲ್ಲದವಳಂತೆ ಮನೆಯವರ ಮುಂದೆ ನಟಿಸುತ್ತಿದ್ದಾಳೆ. ಸಾವಿನ ರಹಸ್ಯ ಬಯಲು ಮಾಡಲು ಕೀರ್ತಿಯೇ ಮೈಮೇಲೆ ಬಂದವಳಂತೆ ಲಕ್ಷ್ಮಿ ನಟಿಸುತ್ತಿದ್ದಾಳೆ. ಆದರೂ ಕಾವೇರಿಯ ಬಾಯಿಯನ್ನು ಬಿಡಿಸಲು ಲಕ್ಷ್ಮಿಗೆ ಆಗುತ್ತಿಲ್ಲ.

ಆದರೆ  ಗಣೇಶ ಚತುರ್ಥಿಯ ದಿನದಂದು ಲಕ್ಷ್ಮಿ ಕೈಗೆ ಪ್ರಮುಖ ಸಾಕ್ಷ್ಯವೊಂದು ಸಿಕ್ಕಿದೆ. ಬೆಟ್ಟದ ಮೇಲೆ ಕಾವೇರಿ ಕುತಂತ್ರವನ್ನು ಬಯಲು ಮಾಡಲು ಹೋದ ಕೀರ್ತಿ ಈ ಸಂದರ್ಭದಲ್ಲಿ ರಹಸ್ಯವಾಗಿ ಕ್ಯಾಮರವೊಂದನ್ನು ಮರದ ಮೇಲೆ ಇಟ್ಟಿದ್ದಳು. ಇದರಲ್ಲಿ ಕೀರ್ತಿ ಹಾಗೂ ಕಾವೇರಿ ಮಾತುಕತೆ ಹಾಗೂ ಕಾವೇರಿ, ಬೆಟ್ಟದ ಮೇಲಿಂದ ಕೀರ್ತಿಯನ್ನು ತಳ್ಳಿದ ದೃಶ್ಯ ಅದರಲ್ಲಿದೆ.  

ಇದೀಗ ಈ ಕ್ಯಾಮರವನ್ನು ಬೆಟ್ಟದ ಮೇಲೆ ನೆಲೆಸಿದ್ದ ಮಹಾದೇವಯ್ಯ, ಲಕ್ಷ್ಮಿ ಕೈ ನೀಡಿದ್ದಾನೆ. ಕ್ಯಾಮರಾದಲ್ಲಿನ ಕಾವೇರಿ ಕೃತ್ಯ  ನೋಡಿದ ಲಕ್ಷ್ಮಿ ಶಾಕ್ ಆಗಿದ್ದಾಳೆ. ಇದೀಗ ಕಾವೇರಿಯ ನಿಜಬಣ್ಣ ಬಯಲು ಮಾಡಲು ಲಕ್ಷ್ಮಿ ಮುಂದಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ