ಅನುಬಂಧ ಅವಾರ್ಡ್ ಆರಂಭಕ್ಕೆ ಕ್ಷಣಗಣನೆ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ
ಕಿರುತೆರೆ ಲೋಕದಲ್ಲಿ ಹಬ್ಬದ ರೀತಿಯೇ ಮೂಡಿಬರುತ್ತಿರುವ ಅನುಬಂಧದಲ್ಲಿ ಸಿನಿಮಾ ನಾಯಕ, ನಾಯಕಿಯರು, ಸ್ಟಾರ್ ನಿರ್ದೇಶಕರು ಭಾಗವಹಿಸಿ, ವಿಜೇತರಿಗೆ ಪ್ರಶಸ್ತಿ ನೀಡುತ್ತಾರೆ. ಜನ ವೋಟ್ ಮೂಲಕ ತಮ್ಮ ನೆಚ್ಚಿನ ನಟ, ನಟಿ, ಪೋಷಕ ಪಾತ್ರಗಳನ್ನು ಆಯ್ಕೆ ಮಾಡಿದ್ದು, ಅದರ ಅನುಸಾರ ಪ್ರಶಸ್ತಿ ಸಿಗಲಿದೆ. ಈ ಬಾರಿಯೂ ಮನರಂಜನೆಗೆ ಏನೂ ಕಡಿಮೆ ಇಲ್ಲದ ಹಾಗೇ ಅನುಬಂಧ ಮೂಡಿಬರಲಿದೆ ಎನ್ನಲಾಗಿದೆ.