‘ಚೆಫ್ ಚಿದಂಬರ’ನಾಗಿ ಅನಿರುದ್ಧ್: ಪೋಸ್ಟರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಭಾನುವಾರ, 6 ಆಗಸ್ಟ್ 2023 (20:28 IST)
WD
ಬೆಂಗಳೂರು: ನಟ ಅನಿರುದ್ಧ್ ಜತ್ಕಾರ್ ಹಿರಿತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರು ನಾಯಕರಾಗಿರುವ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.

‘ರಾಘು’ ಖ್ಯಾತಿಯ ನಿರ್ದೇಶಕ ಆನಂದ್ ರಾಜ್ ನಿರ್ದೇಶಿಸುತ್ತಿರುವ ಅನಿರುದ್ಧ್ ನಾಯಕರಾಗಿರುವ ಸಿನಿಮಾಗೆ ‘ಚೆಫ್ ಚಿದಂಬರ’ ಎನ್ನುವ ಟೈಟಲ್ ಇಡಲಾಗಿದೆ. ಕಿಚ್ಚ ಸುದೀಪ್ ಚಿತ್ರದ ಟೈಟಲ್ ಅನಾವರಣಗೊಳಿಸಿದ್ದಾರೆ.

ಸಿನಿಮಾದಲ್ಲಿ ಅನಿರುದ್ಧ ಚೆಫ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚೆಫ್ ಅವತಾರದಲ್ಲಿ ಅನಿರುದ್ಧ್ ರಕ್ತ ಸಿಕ್ತ ಮಚ್ಚು ಹಿಡಿದು ನಿಂತಿರುವ ಪೋಸ್ಟರ್ ಕುತೂಹಲ ಕೆರಳಿಸುವಂತಿದೆ. ಕಾಮಿಡಿ, ಹಾರರ್ ಕಥಾಹಂದರವನ್ನೊಳಗೊಂಡ ಸಿನಿಮಾ ಇದಾಗಿದೆ. ಆಗಸ್ಟ್ 10 ರಿಂದ  ಚಿತ್ರೀಕರಣ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ