ಅಣ್ಣಯ್ಯ ಧಾರವಾಹಿ ಮೂಲಕ ಹೀರೋ ಆಗಿ ಎಂಟ್ರಿಕೊಡುತ್ತಿರುವ ಈ ನಟ ಯಾರು ಗೊತ್ತಾ
ಅಣ್ಣಯ್ಯ ಧಾರವಾಹಿಯ ಹೀರೋ ಅಣ್ಣಯ್ಯ ಪಾತ್ರ ಮಾಡಲಿರುವ ಸ್ಪುರದ್ರೂಪಿ ನಟನ ಹೆಸರು ವಿಕಾಸ್ ಉತ್ತಯ್ಯ. ಇವರು ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ. ಆದರೆ ಮೂಲತಃ ಕೊಡಗಿನವರು. ನಟನಾಗುವ ಮೊದಲು ಇವರು ಅಡ್ವೊಕೇಟ್ ಆಗಿದ್ದರು. ಆದರೆ ನಟನೆಯ ಮೇಲಿನ ಮೋಹದಿಂದ ವಕೀಲಿ ವೃತ್ತಿ ಬಿಟ್ಟು ಬಣ್ಣದ ಲೋಕಕ್ಕೆ ಬಂದಿದ್ದಾರೆ.
ಕನ್ನಡದಲ್ಲಿ ‘ಆನ’, ‘ಮೇರಿ’ ಎಂಬ ಸಿನಿಮಾಗಳಲ್ಲಿ ಪಾತ್ರ ಮಾಡಿದ್ದಾರೆ. ಆದರೆ ಯಾಕೋ ಈ ಹ್ಯಾಂಡ್ಸಮ್ ಹುಡುಗನಿಗೆ ಸಿನಿಮಾಗಳಲ್ಲಿ ಅದೃಷ್ಟ ಅಷ್ಟೊಂದು ಕೈ ಹಿಡಿಯಲಿಲ್ಲ. ಆದರೆ ಈಗ ಧಾರವಾಹಿ ಮೂಲಕ ಅದೃಷ್ಟ ಪರೀಕ್ಷೆಗಿಳಿಯಲು ಹೊರಟಿದ್ದಾರೆ.
ಜೀ ಕನ್ನಡದಲ್ಲಿ ಸದ್ಯದಲ್ಲೇ ಪ್ರಸಾರವಾಗಲಿರುವ ಅಣ್ಣಯ್ಯ ಧಾರವಾಹಿಯಲ್ಲಿ ವಿಕಾಸ್ ಉತ್ತಯ್ಯಗೆ ನಾಯಕಿಯಾಗುತ್ತಿರುವವರು ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್. ನಾಲ್ವರು ತಂಗಿಯಂದಿರ ಮುದ್ದಿನ ಅಣ್ಣನಾಗಿ, ಪಕ್ಕಾ ಹಳ್ಳಿ ಹೈದನಾಗಿ ವಿಕಾಸ್ ನಿಮ್ಮ ಮುಂದೆ ಸದ್ಯದಲ್ಲೇ ಬರಲಿದ್ದಾರೆ.