ಕನ್ನಡ ಸಿನಿಮಾ ಉದ್ದಾರ ಆಗ್ಬೇಕಾದ್ರೆ ಪೂಜೆ ಅಲ್ಲ, ಒಳ್ಳೆ ಸಿನಿಮಾ ಕೊಡ್ಬೇಕು: ಟೀಕೆಗಳ ನಡುವೆ ಇಂದಿನಿಂದ ಪೂಜೆ

Krishnaveni K

ಮಂಗಳವಾರ, 13 ಆಗಸ್ಟ್ 2024 (09:08 IST)
ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚೆಗೆ ಸತತ ಸೋಲು, ಸಿನಿಮಾಗಳೇ ಇಲ್ಲದೇ ಚಿತ್ರರಂಗ ಬಣಗುಡುವ ಸ್ಥಿತಿಯಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಸಿನಿಮಾ ಕಲಾವಿದರ ಸಂಘದ ಕಟ್ಟಡದಲ್ಲಿ ಇಂದು ಮತ್ತು ನಾಳೆ ಪೂಜೆ, ಹವನ ನಡೆಸಲಾಗುತ್ತಿದೆ. ಇದಕ್ಕೆ ಟೀಕೆಗಳು ಕೇಳಿಬರುತ್ತಿವೆ.

ಕನ್ನಡ ಚಿತ್ರರಂಗದ ಸಮಸ್ಯೆ ನೆಪವಿಟ್ಟುಕೊಂಡು ಪೂಜೆ ಮಾಡುತ್ತಿದ್ದರೂ ಅಸಲಿಗೆ ದರ್ಶನ್ ಬಂಧನವಾಗಿರುವ ಕಾರಣಕ್ಕೇ ಪೂಜೆ ಮಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ. ಇದಕ್ಕೆ ಹಲವರು ಟೀಕೆ ಮಾಡಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗುತ್ತದೆ. ಅವರು ಏನೇ ತಪ್ಪು ಮಾಡಿದರೂ ಶಿಕ್ಷೆಯಾಗಬಾರದು ಎಂದು ಬಯಸುವುದು ತಪ್ಪು. ಅಲ್ಲದೆ, ದರ್ಶನ್ ಒಬ್ಬರಿಂದಲೇ ಚಿತ್ರರಂಗ ಇಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.

ಒಂದು ವೇಳೆ ಸಿನಿಮಾ ರಂಗ ಉದ್ದಾರವಾಗಬೇಕು ಎಂದರೆ ಒಳ್ಳೊಳ್ಳೆ ಸಿನಿಮಾ ಕೊಡಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಯಾಗುತ್ತಿಲ್ಲ. ಇದರ ಬದಲು ಪೂಜೆ, ಹವನ ನಡೆಸಿ ಏನು ಪ್ರಯೋಜನ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮಾಡಿದ್ದಾರೆ.

ಪೂಜೆ ನಡೆಸುತ್ತಿರುವ ಬಗ್ಗೆ ಮೊನ್ನೆಯಷ್ಟೇ ಸ್ಪಷ್ಟನೆ ನೀಡಿದ್ದ ರಾಕ್ ಲೈನ್ ವೆಂಕಟೇಶ್ ಇದು ದರ್ಶನ್ ಗಾಗಿ ಮಾಡುತ್ತಿರುವ ಪೂಜೆಯಲ್ಲ ಎಂದಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಇತ್ತೀಚೆಗಿನ ಸ್ಥಿತಿ ಗತಿ ನೋಡಿ ಪೂಜೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಚಿತ್ರರಂಗ ಉದ್ದಾರವಾಗಬೇಕಾದರೆ ಪೂಜೆ ಅಲ್ಲ, ಒಳ್ಳೆ ಸಿನಿಮಾ, ಬರಹಗಾರರನ್ನು ಸೃಷ್ಟಿಸಿ ಎಂದು ನಟ ಚೇತನ್ ಅಹಿಂಸಾ ಕೂಡಾ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ