ಸಿಂಬು ನಟನೆಯ ಮುಂದಿನ ಚಿತ್ರ ಘೋಷಣೆ

ಗುರುವಾರ, 31 ಡಿಸೆಂಬರ್ 2020 (11:05 IST)
ಚೆನ್ನೈ : ನಟ ಸಿಂಬು ಅವರು ತಮಿಳಿನ ಖ್ಯಾತ ನಟರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವರ ಮುಂದಿನ ಚಿತ್ರ ಘೋಷಣೆಯಾಗಿದೆ.

ಹೌದು. ನಟ ಸಿಂಬು ಅವರು ತಮ್ಮ ನಟನೆಯ  ‘ಈಶ್ವರನ್’ ಮತ್ತು ‘ಕಾನ್ಫರೆನ್ಸ್’ ಚಿತ್ರಗಳನ್ನು ಪೂರ್ಣಗೊಳಿಸಿದ್ದಾರೆ. ‘ಪಾಥಾ ಥಾಲಾ’ ಎಂಬ ಅವರ ಹೊಸ ಚಿತ್ರಕ್ಕೆ ತಾವು ಬದ್ಧರಾಗಿರುವುದಾಗಿ ಪೋಸ್ಟರ್ ಇತ್ತೀಚೆಗೆ ಬಹಿರಂಗವಾಗಿದೆ.

ಈ ಚಿತ್ರವನ್ನು ಕೃಷ್ಣ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ಗೌತಮ್ ಕಾರ್ತಿಕ್  ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ