ಸುನಾಮಿ ಕಿಟ್ಟಿ ವಿರುದ್ಧ ಮತ್ತೊಂದು ದೂರು ದಾಖಲು

ಸೋಮವಾರ, 19 ನವೆಂಬರ್ 2018 (07:02 IST)
ಬೆಂಗಳೂರು : ನಟ ಸುನಾಮಿ ಕಿಟ್ಟಿ ಗಲಾಟೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದೀಗ ಸುನಾಮಿ ಕಿಟ್ಟಿ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾರೆ.


ಹೌದು. ಸುನಾಮಿ ಕಿಟ್ಟಿ ನಗರದ ಶಂಕರ ಮಠದಲ್ಲಿರೋ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದರು. ಆದರೆ ಕಿಟ್ಟಿ ಇತ್ತೀಚೆಗೆ 4 ತಿಂಗಳ ಬಾಡಿಗೆ ಕೊಡದೆ ಮನೆ ಮಾಲೀಕನಿಗೆ ಸತಾಯಿಸುತ್ತಿದ್ದರಂತೆ. ಹೀಗಾಗಿ ಮನೆ ಮಾಲೀಕ ಶಿವಣ್ಣ ಬಾಡಿಗೆ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಕಿಟ್ಟಿ, ಶಿವಣ್ಣ ಅವರಿಗೆ ಅವಾಜ್ ಹಾಕಿದ್ದಾನೆ.


ಈ ಸಂಬಂಧ ಕಿಟ್ಟಿ ವಿರುದ್ಧ ಮಾಲೀಕ ಶಿವಣ್ಣ ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಿಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿಟ್ಟಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ