ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೇ ನಿರಾಸೆ

Sampriya

ಶನಿವಾರ, 5 ಅಕ್ಟೋಬರ್ 2024 (18:00 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೇ ನಿರಾಸೆಯಾಗಿದೆ.  

ಈಗಾಗಲೇ ಹಲವು ಬಾರಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದ್ದು, ದರ್ಶನ್ ಕುಟುಂಬ ಹಾಗೂ ಫ್ಯಾನ್ಸ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಕೋರ್ಟ್ ಮುಂದೂಡಿದೆ.

ನಿನ್ನೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ದಿನದ ಅಂತ್ಯದ ವೇಳೆ ಇಂದು ಮಧ್ಯಾಹ್ನ 12.30ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿತ್ತು. ಇಂದು ದರ್ಶನ್ ಪರ ವಕೀಲ ಸಿಬಿ ನಾಗೇಶ್ ಅವರು ಸುದೀರ್ಘವಾಗಿ ವಾದ ಮಂಡನೆ ಮಾಡಿದರು. ಪ್ರತಿವಾದಕ್ಕೆ ಎಸ್‌ಪಿಪಿ ಅವಕಾಶ ಕೇಳಿದ್ದರಿಂದ ವಿಚಾರಣೆಯನ್ನು ಮಂಗಳವಾರಕ್ಕೆ ಕೋರ್ಟ್‌ ಮುಂದೂಡಿಕೆ ಮಾಡಿದೆ.

ಆರೋಪಿಗಳಾದ ಪವಿತ್ರಾಗೌಡ ಮತ್ತು ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಯನ್ನೂ ಮಂಗಳವಾರಕ್ಕೆ ಮುಂದೂಡಲಾಗಿದೆ. ಅಂದು ಮಧ್ಯಾಹ್ನ 12:30 ಕ್ಕೆ ವಿಚಾರಣೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ