ಪೊಲೀಸ್ ಠಾಣೆಯಲ್ಲಿ ಬಾಲಿವುಡ್ ನ ಮತ್ತೊಬ್ಬ ಹಾಟ್ ನಟಿ

ಗುರುವಾರ, 24 ಸೆಪ್ಟಂಬರ್ 2020 (23:34 IST)
ಬಾಲಿವುಡ್ ಹಾಟ್ ನಟಿಯೊಬ್ಬರು ಪೊಲೀಸ್ ಠಾಣೆಯೊಂದರಲ್ಲಿ ವಿಚಾರಣೆ ಎದುರಿಸಿದ್ದಾರೆ.

ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಕಿರುಕುಳ, ದೌರ್ಜನ್ಯದ ಆರೋಪಗಳನ್ನು ಹೊರಿಸಿರುವ ನಟಿ ಪಾಯಲ್ ಘೋಷ್, ವರ್ಸೋವಾ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ಬಾಲಿವುಡ್ ನಟಿಯನ್ನು ವಿಚಾರಣೆಗೆ ಕರೆಸಲಾಯಿತು. ಸೆಪ್ಟೆಂಬರ್ 21 ರಂದು ಪಾಯಲ್ ಮತ್ತು ಅವರ ವಕೀಲ ನಿತಿನ್ ಸತ್ಪೂಟ್ ಜೊತೆ ಸೇರಿ ನಿರ್ಮಾಪಕ ಅನುರಾಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 354, 341, 342 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಆಕೆಯ ಹೇಳಿಕೆಯನ್ನು ಆ ದಿನ ದಾಖಲಿಸಲಾಗಿದೆ. ಅನುರಾಗ್, ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಅವರ ಕಾನೂನು ಸಲಹೆಗಾರರ ​​ಮೂಲಕ ದುರುಪಯೋಗದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ