ಡ್ರಗ್ ಕೇಸ್ ನಲ್ಲಿ ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ! ಶೀಘ್ರ ಸಿಸಿಬಿಯಿಂದ ವಿಚಾರಣೆ

ಬುಧವಾರ, 23 ಡಿಸೆಂಬರ್ 2020 (09:48 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಕೇಸ್ ನಲ್ಲಿ ಇನ್ನೊಬ್ಬ ನಟಿಯ ಹೆಸರು ಕೇಳಿಬಂದಿದ್ದು, ಸಿಸಿಬಿ ಪೊಲೀಸರು ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದ್ದಾರೆ.


ಡ್ರಗ್ ಕೇಸ್ ಗೆ ಸಂಬಂಧಪಟ್ಟಂತೆ 12 ನೇ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸುವಾಗ ಆತ ಮತ್ತೊಬ್ಬ ನಟಿಯ ಹೆಸರು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಈಕೆ ಪೇಜ್ 3 ಪಾರ್ಟಿಗಳು, ಡ್ರಗ್ ಪೆಡ್ಲರ್ ಗಳು ಆಯೋಜಿಸುತ್ತಿದ್ದ ಡ್ರಗ್ ಪಾರ್ಟಿಗಳಿಗೆ ತೆರಳುತ್ತಿದ್ದಳು ಎಂದು ಈತ ಹೇಳಿದ್ದಾನೆ. ಮೂಲಗಳ ಪ್ರಕಾರ ಈ ನಟಿ ಈಗ ವಿದೇಶ ಪ್ರವಾಸದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ