ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದು ಟ್ವಿಸ್ಟ್‌: ಮಿಡ್ ವೀಕ್‌ನಲ್ಲೇ ಎಲಿಮಿನೇಟ್‌ ಆದ್ರ ಫೈರ್‌ಬ್ರ್ಯಾಂಡ್‌

Sampriya

ಶುಕ್ರವಾರ, 27 ಡಿಸೆಂಬರ್ 2024 (12:53 IST)
Photo Courtesy X
ಬೆಂಗಳೂರು: ಕನ್ನಡದ ಬಿಗ್ ಬಾಸ್ 90ನೇ ದಿನದತ್ತ ಸಾಗುತ್ತಿದೆ. ಸ್ಪರ್ಧಿಗಳು ಉತ್ಸಾಹದಿಂದ ಪೈಪೋಟಿಗೆ ಬಿದ್ದು ಮನರಂಜಿಸುತ್ತಿದ್ದಾರೆ. ಹೀಗಿರುವಾಗ ಈ ವಾರ ಬಿಗ್ ಬಾಸ್ ಸ್ಪರ್ಧಿಯೊಬ್ಬರಿಗೆ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಶಾಕ್ ಎಂಬ ಸುದ್ದಿ ಹರಿದಾಡುತ್ತಿದೆ.

ಕಳೆದ ವಾರಾಂತ್ಯದಲ್ಲಿ ತ್ರಿವಿಕ್ರಮ್‌ಗೆ ಶಾಕ್‌ ನೀಡಿದ್ದ ಬಿಗ್‌ಬಾಸ್‌, ಮತ್ತೆ ದೊಡ್ಮನೆಗೆ ಕರೆಸಿಕೊಂಡಿತ್ತು. ಹೀಗಾಗಿ, ಎಲಿಮಿನೇಷನ್‌  ನಡೆದಿರಲಿಲ್ಲ. ಈ ಮಧ್ಯೆ ವಾರದ ಮಧ್ಯದಲ್ಲೇ ದೊಡ್ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೇ ಹೊರ ನಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರಸ್ತುತ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಹನುಮಂತ, ಧನರಾಜ್, ಭವ್ಯಾ, ಮೋಕ್ಷಿತಾ, ಗೌತಮಿ, ಐಶ್ವರ್ಯಾ‌, ಚೈತ್ರಾ ಈ ಸ್ಪರ್ಧಿಗಳ ನಡುವೆ ಅಳಿವು ಮತ್ತು ಉಳಿವಿಗಾಗಿ ಜಟಾಪಟಿ ನಡೆಯುತ್ತಿದೆ. ಹೀಗಿರುವಾಗ ಇವರ ಪೈಕಿ ಒಬ್ಬರು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.  

ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಪರ ಮತ್ತು ವಿರೋಧದ ಚರ್ಚೆ ಶುರುವಾಗಿದ್ದು, ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬಿಗ್ ಬಾಸ್‌ನ ಮುಂದಿನ ಸಂಚಿಕೆಯಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ