ಯುಐ ಸೆಲೆಬ್ರಿಟಿ ಶೋನಲ್ಲಿ ಕಿಚ್ಚ ಸುದೀಪ್, ಯಶ್ ಮುಖಾಮುಖಿಯಾದಾಗ ಏನಾಯ್ತು
ಸುದೀಪ್ ಮತ್ತು ಯಶ್ ಇಬ್ಬರೂ ಉಪೇಂದ್ರ ಅಭಿಮಾನಿಗಳೇ. ಯಶ್ ಪತ್ನಿ ರಾಧಿಕಾ ಜೊತೆ ಸಿನಿಮಾ ನೋಡಲು ಬಂದಿದ್ದರು. ಸುದೀಪ್ ಕೂಡಾ ಸಿನಿಮಾ ನೋಡಲು ಬಂದಿದ್ದಾರೆ. ಈ ವೇಳೆ ಇಬ್ಬರೂ ಪರಸ್ಪರ ಮುಖಾಮುಖಿಯಾಗಿದ್ದಾರೆ.
ಸುದೀಪ್ ಮತ್ತು ಯಶ್ ನಡುವೆ ಕೆಲವು ವರ್ಷದ ಹಿಂದೆ ಸೋಷಿಯಲ್ ಮೀಡಿಯಾ ಚಾಲೆಂಜ್ ಒಂದರ ವಿಚಾರಕ್ಕೆ ವೈಮನಸ್ಯವಾಗಿತ್ತು. ಕಿಚ್ಚ ಸುದೀಪ್ ಎಂದು ಯಶ್ ಕರೆದಿದ್ದು ಕಿಚ್ಚನಿಗೆ ಇಷ್ಟವಾಗಿರಲಿಲ್ಲ. ಇದರ ಹೊರತಾಗಿಯೂ ಇಬ್ಬರೂ ಅಪರೂಪಕ್ಕೆ ಭೇಟಿಯಾದರೂ ಪರಸ್ಪರ ಹಾಯ್-ಬಾಯ್ ಇದ್ದೇ ಇರುತ್ತಿತ್ತು.
ನಿನ್ನೆ ಪರಸ್ಪರ ಭೇಟಿಯಾದಾಗಲೂ ಕಿಚ್ಚ ಮತ್ತು ಯಶ್ ಪರಸ್ಪರ ಆಲಂಗಿಸಿಕೊಂಡು ವಿಶ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಮ್ಯಾಕ್ಸ್ ಮೂವಿಗೆ ಯಶ್ ಶುಭ ಹಾರೈಸಿದ್ದಾರೆ. ಬಳಿಕ ಇಬ್ಬರೂ ನಗು ನಗುತ್ತಲೇ ಕೆಲವು ಹೊತ್ತು ಮಾತನಾಡಿದ್ದು ಅಭಿಮಾನಿಗಳ ಗಮನ ಸೆಳೆದಿದ್ದು ಈ ಇಬ್ಬರೂ ಯಾವತ್ತೂ ಹೀಗೇ ಇರಲಿ ಎಂದು ಹಾರೈಸಿದ್ದಾರೆ.