ಆಂಕರ್ ಅನುಶ್ರೀ ಬರೆದ ಈ ಸಾಲುಗಳು ವೈರಲ್ ಆಯ್ತು!

ಮಂಗಳವಾರ, 16 ಜೂನ್ 2020 (09:31 IST)
ಬೆಂಗಳೂರು: ಆಂಕರಿಂಗ್ ಗೆ ಮತ್ತೊಂದು ಹೆಸರೇ ಅನುಶ್ರೀ ಎನ್ನುವಷ್ಟು ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದಾರೆ ಈ ಕನ್ನಡತಿ. ಯಾವುದೇ ವಿಚಾರವಿರಲಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸುವ ಅನುಶ್ರೀ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬರೆದ ಸಾಲೊಂದು ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.


ಸುಶಾಂತ್ ಸಾವಿನ ಬಳಿಕ ಇನ್ ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಕನ್ನಡದಲ್ಲಿ ಅನುಶ್ರೀ ಬರೆದ ಸಾಲುಗಳು ಈಗ ನೆಟ್ಟಿಗರ ಗಮನ ಸೆಳೆದಿದೆ. ಯಾವ ನಗುವಿನ ಹಿಂದೆ ಯಾವ ನೋವಿರುತ್ತದೋ ಯಾರು ಬಲ್ಲರು? ಎಂದು ಅವರು ಬರೆದುಕೊಂಡ ಸಾಲುಗಳು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಒಂಟಿತನ ಎನ್ನುವುದು ಕೊರೋನಾ ವೈರಸ್ ಗಿಂತ ಅಪಾಯಕಾರಿ. ಯಾರೂ ಯಾರ ಬಗ್ಗೆಯೂ ಕೆಟ್ಟದಾಗಿ ಹೀಯಾಳಿಸುವ ಮೊದಲು, ಕಾಮೆಂಟ್ ಮಾಡುವ ಮೊದಲು ಯೋಚಿಸಿ. ಅಂತಹ ಕೆಲವು ಮಾತುಗಳು ಕೆಲವರನ್ನು ಇಲ್ಲವಾಗಿಸಿಬಿಡುತ್ತದೆ. ಎಲ್ಲಾ ಮನಸ್ತಾಪಗಳನ್ನು ದೂರ ಇಡಿ. ಸ್ನೇಹಿತರಿಗೋ, ಮನೆಯವರಿಗೋ ಕರೆ ಮಾಡಬೇಕೆಂದಿದ್ದರೆ ಈವತ್ತೇ ಕರೆ ಮಾಡಿ. ಇನ್ನೊಬ್ಬರ ಮಾತಿಗೆ ಕಿವಿಯಾಗಿ. ಯಾಕಂದ್ರೆ ನಾಳೆ ಅವರಿಲ್ಲವಾಗಬಹುದು’ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ