ಲಾಕ್ ಡೌನ್ ನಿಂದ ಬದುಕು ಕಳೆದುಕೊಂಡಿರುವ ನಟ-ನಟಿಯರು

ಮಂಗಳವಾರ, 16 ಜೂನ್ 2020 (09:20 IST)
ಬೆಂಗಳೂರು: ಲಾಕ್ ಡೌನ್ ಎಂಬುದು ಎಲ್ಲಾ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ. ಇದಕ್ಕೆ ಸಿನಿ ಉದ್ಯಮವೂ ಹೊರತಲ್ಲ. ಕಲೆಯನ್ನೇ ನೆಚ್ಚಿ ಬದುಕು ಕಟ್ಟಿಕೊಂಡಿದ್ದ ಅನೇಕರು ಇಂದು ಭವಿಷ್ಯದ ಬಗ್ಗೆ ಅಭದ್ರತೆಯ ಭಯದಲ್ಲಿ ಬದುಕು ನಡೆಸುತ್ತಿದ್ದಾರೆ.


ಲಾಕ್ ಡೌನ್ ನಿಂದಾಗಿ ಅನೇಕ ಚಿತ್ರಗಳ ಚಿತ್ರೀಕರಣ ಅರ್ಧಕ್ಕೇ ನಿಂತಿದೆ. ಇನ್ನು ಕೆಲವು ಸಿನಿಮಾಗಳು ಬಿಡುಗಡೆಗೆ ಕಾದು ಕುಳಿತಿವೆ. ಚಿತ್ರಮಂದಿರ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದ ತಕ್ಷಣ ಹಲವು ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾದರೆ ಯಾವ ಸಿನಿಮಾಗಳೂ ದುಡ್ಡು ಮಾಡುವುದು ಕಷ್ಟ.

ಇದರಿಂದ ಅನೇಕ ನಿರ್ಮಾಪಕರು ನಷ್ಟ ಮಾಡಿಕೊಳ್ಳುತ್ತಾರೆ. ಹೊಸಬರ ಮೇಲೆ ಹಣ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಇನ್ನು ಲಾಕ್ ಡೌನ್ ಗಿಂತ ಕೆಲವೇ ದಿನಗಳ ಮೊದಲು ಚಿತ್ರ ಬಿಡುಗಡೆಯಾಗಿ ಅದು ಪೂರ್ತಿಯಾಗಿ ಓಡದೇ ನಷ್ಟ ಮಾಡಿಕೊಂಡ ಸಿನಿಮಾಗಳು ಎಷ್ಟೋ ಇವೆ. ಅಂತಹ ಸಿನಿಮಾಗೆ ಹಾಕಿದ ಬಂಡವಾಳ ತೆಗೆಯಲು ಸಾಧ‍್ಯವಾಗದೇ ಅತಂತ್ರವಾದವರು ಇನ್ನೆಷ್ಟೋ.

ಹೀಗಾಗಿಯೇ ಎಷ್ಟೋ ಜನ ಉದ್ಯೋಗದ ಜತೆ ಭರವಸೆಯನ್ನೂ ಕಳೆದುಕೊಂಡಿದ್ದಾರೆ. ಇದರಿಂದಾಗಿಯೇ ಹಲವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕೊರೋನಾ ಎಂಬ ಒಂದು ಮಹಾಮಾರಿ ಎಷ್ಟು ಭೀಕರ ಪರಿಣಾಮ ಎಂಬುದಕ್ಕೆ ಇದೇ ಸಾಕ್ಷಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ