ಪತಿ ಶಕ್ತಿಪ್ರಸಾದ್ ಸಮಾಧಿ ಪಕ್ಕದಲ್ಲೇ ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ಅಂತ್ಯಕ್ರಿಯೆ

ಭಾನುವಾರ, 24 ಜುಲೈ 2022 (18:09 IST)
ಬೆಂಗಳೂರು: ನಿನ್ನೆಯಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದ ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ಅಂತ್ಯಕ್ರಿಯೆ ಇಂದು ನೆರವೇರಿದೆ.

ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಪತಿ ಶಕ್ತಿಪ್ರಸಾದ್ ಸಮಾಧಿ ಪಕ್ಕದಲ್ಲೇ ಲಕ್ಷ್ಮೀದೇವಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುತ್ರ ಅರ್ಜುನ್ ಸರ್ಜಾ ಅಂತ್ಯಕ್ರಿಯೆ ವಿಧಿವಿಧಾನ ನೆರವೇರಿಸಿದರು.

ಈ ವೇಳೆ ಮೊಮ್ಮಗ ಧ್ರುವ ಸರ್ಜಾ, ಅವರ ಕುಟುಂಬಸ್ಥರು, ಅರ್ಜುನ್ ಸರ್ಜಾ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ