ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀ ದೇವಿ ನಿಧನ

ಶನಿವಾರ, 23 ಜುಲೈ 2022 (16:41 IST)
ಬೆಂಗಳೂರು: ಸರ್ಜಾ ಕುಟುಂಬಕ್ಕೆ ಮತ್ತೆ ಸಾವಿನ ಆಘಾತ ಎದುರಾಗಿದೆ. ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀ ದೇವಿ ಇಂದು ನಿಧನರಾಗಿದ್ದಾರೆ.
 

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀ ದೇವಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅಜ್ಜಿ ಲಕ್ಷ್ಮೀ ದೇವಿ ಸಾವಿಗೆ ಮೊಮ್ಮಗ ಧ್ರುವ ಸರ್ಜಾ, ಮೇಘನಾ ರಾಜ್ ಸೇರಿದಂತೆ ಇಡೀ ಕುಟುಂಬಸ್ಥರು ಭಾವನಾತ್ಮಕ ಸಂದೇಶದ ಮೂಲಕ ಕಂಬನಿ ಮಿಡಿದಿದ್ದಾರೆ.

2020 ರಲ್ಲಿ ಚಿರು ಸರ್ಜಾ ಅಕಾಲಿಕ ನಿಧನದ ಬಳಿಕ ಆಘಾತಕ್ಕೊಳಗಾಗಿದ್ದ ಸರ್ಜಾ ಕುಟುಂಬಕ್ಕೆ ರಾಯನ್ ಜನನ ಖುಷಿ ತಂದಿತ್ತು. ಆದರೆ ಈಗ ಮತ್ತೆ ಅಜ್ಜಿಯ ಸಾವು ಕುಟುಂಬಕ್ಕೆ ಆಘಾತ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ