ವಿಕ್ರಾಂತ್ ರೋಣನ ಜೊತೆ ಪುನೀತ್ ಕಟೌಟ್

ಶನಿವಾರ, 23 ಜುಲೈ 2022 (09:30 IST)
ಬೆಂಗಳೂರು: ಪವರ್ ‍ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಎಂಥಾ ಒಳ್ಳೆಯ ಸ್ನೇಹ ಸಂಬಂಧವಿತ್ತು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಪುನೀತ್ ತೀರಿಕೊಂಡಾಗ ಸುದೀಪ್ ಕಣ್ಣೀರು ಹಾಕಿದ್ದರು.
 

ಇದೀಗ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಜುಲೈ 28 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಸುದೀಪ್ ಅಭಿಮಾನಿಗಳು ಬೃಹತ್ ಕಟೌಟ್ ಇರಿಸುತ್ತಿದ್ದಾರೆ.

ಸಾಮಾನ್ಯವಾಗಿ ಆಯಾ ಸಿನಿಮಾದ ನಾಯಕನ ಕಟೌಟ್ ಮಾತ್ರ ಇಡಲಾಗುತ್ತದೆ. ಆದರೆ ಈ ಬಾರಿ ಸುದೀಪ್ ಕಟೌಟ್ ಜೊತೆಗೆ ಪುನೀತ್ ಕೂಡಾ ಇರುವ ಕಟೌಟ್ ಹಾಕಿಸಿ ಇಬ್ಬರ ನಡುವಿನ ಸ್ನೇಹ ಸ್ಮರಣೀಯಗೊಳಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ