ತಮಿಳುನಾಡು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಎಂಗೇಜ್ಮೆಂಟ್ ಸದ್ದಿಲ್ಲದೆ ನಡೆದಿದೆ. ವಿದೇಶಿ ಹುಡುಗನ ಜತೆ ಇಂದು ಅನನ್ಯಾ ಸರ್ಜಾ ನಿಶ್ಚಿತಾರ್ಥ ನಡೆದಿದೆ.
13 ವರ್ಷಗಳ ಪ್ರೀ ಮಾಡಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಟಲಿಯಲ್ಲಿ ಗೆಳೆಯನ ಜತೆ ಅಂಜನಾ ರೋಮ್ಯಾಂಟಿಕ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಇನ್ನೂ ನಿಶ್ಚಿತಾರ್ಥ ಸಮಾರಂಭದಲ್ಲಿ ಕೇವಲ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ, ನಟಿ ಐಶ್ವರ್ಯಾ ಅವರು ಕಳೆದ ವರ್ಷ ತಮಿಳು ನಟ ಉಮಾಪತಿ ಜತೆ ಹಸೆಮಣೆ ಏರಿದ್ದರು. ಜೂನ್ 10ರಂದು ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಕೂಡಾ ಪ್ರೀತಿಸಿ, ಮದುವೆಯಾಗಿದ್ದರು.
ಇದೀಗ ಅರ್ಜುನ್ ಅವರ ಎರಡನೇ ಮಗಳು ಕೂಡಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.