ಕೇರಳ: ರಾಜಾ ರಾಣಿ, ಬೆಂಗಳೂರು ಡೇಸ್ ಸಿನಿಮಾದ ಮೂಲಕ ಎಲ್ಲರ ಮನಗೆದ್ದಿರುವ ನಟಿ ನಜ್ರಿಯಾ ಜನೀಮ್ ಫಹಾದ್ ಅವರು ದಿಢೀರನೇ ಸೋಶಿಯಲ್ ಮೀಡಿಯಾದಿಂದ ದೂರು ಉಳಿದ ಕಾರಣದ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದ ನಜ್ರೀಯಾ ಅವರು ಈಚೆಗೆ ಯಾವುದೇ ಪೋಸ್ಟ್ ಹಾಕದೆ ಸೈಲೆಂಟ್ ಆಗಿದ್ದರು. ಈ ವಿಚಾರವಾಗಿ ಕೊನೆಗೂ ನಟಿ ಮೌನ ಮುರಿದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಕಳೆದ ಕೆಲ ತಿಂಗಳಿನಿಂದ ಭಾವನಾತ್ಮಕವಾಗಿ ಎದುರಿಸಿದ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.
ಅವರು ಬರೆದಿದ್ದಾರೆ, "ನೀವೆಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ನಾನು ಸ್ವಲ್ಪ ಸಮಯದವರೆಗೆ ಏಕೆ ಗೈರುಹಾಜರಾಗಿದ್ದೆ ಎಂಬುದನ್ನು ಹಂಚಿಕೊಳ್ಳಲು ನಾನು ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ. ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನಾನು ಯಾವಾಗಲೂ ಈ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದೆ. ನಾನು ನನ್ನ ಭಾವನಾತ್ಮಕ ಯೋಗಕ್ಷೇಮ ಮತ್ತು ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ, ಹಾಗಾಗಿ ನಾನು ದೂರ ಉಳಿದೆ.
ನಜ್ರಿಯಾ ನಾಜಿಮ್ ಅವರು ಈ ಸಂದರ್ಭದಲ್ಲಿ ತನ್ನ 30ನೇ ಹುಟ್ಟುಹಬ್ಬ, ಹೊಸ ವರ್ಷ ಹಾಗೂ ಅವರು ಚಲನಚಿತ್ರ ಸೂಕ್ಷ್ಮದರ್ಶಿನಿ ಯಶಸ್ಸನ್ನು ಆಚರಿಸುವುದನ್ನು ಮಿಸ್ ಮಾಡಿದರು.
ನಾನು ಏಕೆ ಕಾಣೆಯಾಗಿದ್ದೇನೆ ಎಂಬುದನ್ನು ವಿವರಿಸದಿದ್ದಕ್ಕಾಗಿ ಮತ್ತು ಕರೆಗಳನ್ನು ಸ್ವೀಕರಿಸದ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸದಿದ್ದಕ್ಕಾಗಿ ನಾನು ನನ್ನ ಎಲ್ಲ ಸ್ನೇಹಿತರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಉಂಟು ಮಾಡಿದ ಚಿಂತೆ ಅಥವಾ ಅನಾನುಕೂಲತೆಗಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ.
ಟಿಪ್ಪಣಿಯಲ್ಲಿ, ಕೆಲಸಕ್ಕಾಗಿ ತನ್ನನ್ನು ತಲುಪಲು ಪ್ರಯತ್ನಿಸಿದ ತನ್ನ ಸಹೋದ್ಯೋಗಿಗಳಿಗೆ ನಜ್ರಿಯಾ ಕ್ಷಮೆಯಾಚಿಸಿದ್ದಾರೆ. "ನಾನು ಗೈರುಹಾಜರಾಗಿದ್ದೇನೆ ಮತ್ತು ಉಂಟು ಮಾಡಿದ ಅಡ್ಡಿಗಳಿಗಾಗಿ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
ಆದರೆ ಈ ನೋಟಿನಲ್ಲಿ ಯಾವಾ ವಿಚಾರದ ಸಲುವಾಗಿ ನಟಿ ಭಾವನಾತ್ಮಕವಾಗಿ ಕುಗ್ಗಿರುವುದಾಗಿ ಹೇಳಿಕೊಂಡಿಲ್ಲ. ಅದಲ್ಲದೆ ಈ ಪೋಸ್ಟ್ ನೋಡಿದ ಅವರ ಫ್ಯಾನ್ಸ್ ದಯವಿಟ್ಟು ಬೇರೆ ನಟ ನಟಿಯರ ಹಾಗೇ ಡಿವೋರ್ಸ್ ವಿಚಾರವನ್ನು ಅನೌನ್ಸ್ ಮಾಡಬೇಡಿ. ನಿಮ್ಮ ಪೋಸ್ಟ್ ನೋಡಿ ಒಮ್ಮೆಲೇ ಗಾಬರಿಯಾಯಿತು. ಆದರೆ ಈ ಪೋಸ್ಟ್ ಡೀವೋರ್ಸ್ ವಿಚಾರಕ್ಕೆ ಸಂಬಂಧಿದಲ್ಲವೆಂದು ಸ್ವಲ್ಪ ನಿರಾಳವಾಯಿತು. ನೀವು ಖಂಡಿತವಾಗಿಯೂ ಸ್ಟ್ರಾಂಗ್ ಆಗಿ ಹೊರಬರುತ್ತೀರಿ ಎಂದು ಫ್ಯಾನ್ಸ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ.