ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

Sampriya

ಗುರುವಾರ, 17 ಏಪ್ರಿಲ್ 2025 (18:18 IST)
Photo Credit X
ಬೆಂಗಳೂರು: ಸಿನಿಮಾ ರಂಗ ಹಾಗೂ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಇಂದು ಐದನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಬಗ್ಗೆ ಗುಣಗಾನ ಮಾಡಿ ನಿಖಿಲ್ ಅವರು ಹಂಚಿಕೊಂಡಿದ್ದಾರೆ.

ನೀನು ನನ್ನ ಜೀವನದಲ್ಲಿ ಸಿಕ್ಕಿರುವ ಅತ್ಯಮೂಲ್ಯ ಉಡುಗೊರೆ. ನಿನ್ನ ಪ್ರೀತಿ, ಶಕ್ತಿ, ತ್ಯಾಗ ಮತ್ತು ಕೃಪೆ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನೀನು ನನಗೆ ಸ್ಫೂರ್ತಿಯಾಗಿರುವೆ. ನೀನು ನನ್ನ ಜೀವನಕ್ಕೆ ಬೆಳಕು ತಂದಿರುವುದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮೊಂದಿಗೆ ಜೀವನದ ಈ ಪ್ರಯಾಣದಲ್ಲಿ ಜೊತೆಯಾಗಿ ನಡೆಯಲು ನಾನು ತುಂಬಾ ಧನ್ಯನಾಗಿದ್ದೇನೆ. ಪ್ರತಿದಿನವೂ ನಾನು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ, ನಮಗೆ ವಾರ್ಷಿಕೋತ್ಸವದ ಶುಭಾಶಯಗಳು ಎಂದು ನಿಖಿಲ್ ಶುಭಕೋರಿದ್ದಾರೆ.

2020ರಲ್ಲಿ ರೇವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಅವರಿಗೆ ಒಂದು ಗಂಡು ಮಗುವಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ರೇವತಿ ಅವರು ಆಗಾಗ ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಶೇರ್ ಮಾಡುತ್ತಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ