ಹೊಸ ದುಬಾರಿ ಕಾರಿನ ಒಡತಿಯಾದ ಅಶ್ವಿನಿ ಪುನೀತ್ ರಾಜಕುಮಾರ್

Sampriya

ಭಾನುವಾರ, 31 ಮಾರ್ಚ್ 2024 (15:35 IST)
Photo Courtesy X
ಬೆಂಗಳೂರು:  ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಐಷಾರಾಮಿ ಕಾರನ್ನು ಬರಮಾಡಿಕೊಂಡಿದ್ದಾರೆ.

ಆಡಿ  ಬೆಂಗಳೂರು ಸೆಂಟ್ರಲ್ ಪೇಜ್‌ನಲ್ಲಿ ಅಶ್ವಿನಿ ಅವರು ಹೊಸ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿವೆ.

ಪುನೀತ್ ಅವರಿಗೆ ಕಾರು, ಬೈಕ್‌ಗಳ ಕ್ರೇಜ್‌ ಜೋರಾಗಿಯೇ ಇತ್ತು. ಅವರ ಬಳಿ ಈಗಾಗಲೇ ಸಾಕಷ್ಟು ಕಾರು, ಬೈಕ್‌ಗಳ ಕಲೆಕ್ಷನ್ ಇದೆ. ಅವುಗಳ ಪಟ್ಟಿಗೆ ಇದೀಗ ಆಡಿ ಕ್ಯೂ 7 ಕಾರು ಸೇರಿಕೊಂಡಿದೆ.

ಕಾರಿನ ವಿಶೇಷತೆ ಹೀಗಿದೆ: ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ಭಿನ್ನವಾಗಿದೆ. ಪನೋರಮಿಕ್ ಸನ್‌ರೂಫ್, 4 ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, 250 KMPH ಸ್ಪೀಡ್ ಹೀಗೆ ಸಾಕಷ್ಟು ಫೀಚರ್ಸ್ ಈ ಕಾರ್‌ನಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ