ಆಟಕ್ಕುಂಟು ಲೆಕ್ಕಕ್ಕಿಲ್ಲ: ಎದೆಯದುರಿಸೋ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರ!

ಸೋಮವಾರ, 16 ಸೆಪ್ಟಂಬರ್ 2019 (16:44 IST)
ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೇಲರ್ ನೋಡಿದ ಅನೇಕರು ಅದರೊಳಗಿನ ದೃಷ್ಯಾವಳಿಗಳನ್ನು ಕಂಡು ದಂಗಾಗಿದ್ದಾರೆ. ಕೊಂಚ ಹಾರರ್ ಟಚ್ ಕೂಡಾ ಇದೆಯೇನೋ ಎಂಬಂಥಾ ಭಾವನೆಯನ್ನೂ ಕೂಡಾ ಈ ಟ್ರೇಲರ್ ಮೂಡಿಸಿದೆ.

ಈ ಹಾರರ್ ಅನ್ನೋ ವಿಚಾರ ಕೂಡಾ ಮನೋ ವ್ಯಾಕುಲದ ಒಂದು ಮುಖ. ಮಾನಸಿಕ ಸಮಸ್ಯೆಗಳು ಉಲ್ಬಣಿಸುತ್ತಾ ಹೋದಂತೆ ಅಂಥಾ ಮನುಷ್ಯರ ವರ್ತನೆಗಳು ಪಕ್ಕಾ ಹಾರರ್ ಟಚ್ ಪಡೆದುಕೊಳ್ಳುತ್ತವೆ. ಆ ಹಂತ ತಲುಪೋಚವರೆಗೂ ಇಂಥವರು ನಮ್ಮ ನಡುವೆಯೇ ಇದ್ದರೂ ಆ ಬಗ್ಗೆ ಸಣ್ಣ ಸುಳಿವೂ ಸಿಗುವುದಿಲ್ಲ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಕಥೆಯ ಮೂಲ ಎಳೆ ಇರುವುದೂ ಕೂಡಾ ಅಂಥಾ ಮನೋವ್ಯಾಕುಲದಲ್ಲಿಯೇ. ಸೈಕಾಲಜಿ ಇಂಥಾ ಅನೇಕಾನೇಕ ಕಾಯಿಲೆಗಳ ಬಗ್ಗೆ ಮಾಹಿತಿಗಳನ್ನು ಬಚ್ಚಿಟ್ಟುಕೊಂಡಿದೆ. ಆದರೆ ಅದೇನೇ ಇದ್ದರೂ ಇದರಿಂದಾಗೋ ಅನಾಹುತಗಳನ್ನು ಸಂಪೂರ್ಣವಾಗಿ ತಡಿಯೋದು ಕಷ್ಟ. ಪ್ರತೀ ನಿತ್ಯ ನಮಗೆ ಅಚ್ಚರಿಯಾಗುವಂಥಾ ಭಯಾನಕವಾದ, ವಿಚಿತ್ರವಾದ ಕ್ರೈಂ, ಕೊಲೆಗಳು ನಡೆಯುತ್ತಿರುತ್ತವಲ್ಲಾ? ಅದಕ್ಕೆ ಕಾರಣವಾದ ಪ್ರತಿಯೊಬ್ಬರಿಗೂ ಇಂಥಾ ಮಾನಸಿಕ ಸಮಸ್ಯೆಗಳಿರುತ್ತವೆ. ಅದು ಗೊತ್ತಾಗೋದು ಇಂಥಾ ಕ್ರೈಂಗಳು ನಡೆದಾಗಲೇ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರವೂ ಅಂಥಾದ್ದೇ ರೋಚಕ ಕಥೆಯನ್ನೊಳಗೊಂಡಿದೆ. ಹೊರ ಜಗತ್ತಿಗೆ ಗೊತ್ತಿರೋದು ಕ್ರೈಂನ ಒಂದು ಮುಖ ಮಾತ್ರ. ವಿಚಿತ್ರವಾದ ಕ್ರೈಂಗಳು ನಡೆದಾಗ ಅದಕ್ಕೆ ಪೊಲೀಸ್ ತನಿಖೆಗಳೂ ನಾನಾ ಅಸಲೀ ಕಾರಣವನ್ನು ಹುಡುಕುತ್ತವೆ.

ಆದರೆ ಮನುಷ್ಯರನ್ನು ಒಳಗೊಳಗೇ ಕೊರೆಯೋ ಮಾನಸಿಕ ಸಮಸ್ಯೆ ಉಲ್ಬಣಿಸುತ್ತಾ ಅಂಥಾ ಕ್ರೈಂ ಮಾಡುವ ಮನಸ್ಥಿತಿಗೆ ತಂದು ನಿಲ್ಲಿಸುತ್ತವೆಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇಂಥಾ ಸೂಕ್ಷ್ಮ ಅಂಶಗಳನ್ನೊಳಗೊಂಡ ಹೊಸಾ ಬಗೆಯ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ