ಕೆಎಲ್ ರಾಹುಲ್ ಜೊತೆ ಮದುವೆ ರೂಮರ್ ಗಳಿಗೆ ಪ್ರತಿಕ್ರಿಯಿಸಿದ ಅಥಿಯಾ ಶೆಟ್ಟಿ
ಈಗಾಗಲೇ ಈ ಜೋಡಿ ಮುಂಬೈನ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ವಿವಾಹ ನಂತರದ ಜೀವನಕ್ಕೆ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿಯಿತ್ತು. ಇದಕ್ಕೆ ಅಥಿಯಾ ಪ್ರತಿಕ್ರಿಯಿಸಿದ್ದಾರೆ.
ನಾನು ನನ್ನ ಪೋಷಕರನ್ನು ಬಿಟ್ಟು ಬೇರೆ ಯಾರೊಂದಿಗೂ ಹೊಸ ಮನೆಗೆ ಹೋಗುತ್ತಿಲ್ಲ. ಈ ಹೊಸ ಮನೆಯಲ್ಲಿ ನನ್ನ ಕುಟುಂಬದವರು ವಾಸವಿರಲಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಿ ನನಗೆ ಸುಸ್ತಾಗಿದೆ ಎಂದಿದ್ದಾರೆ.