ಡಿ.11ಕ್ಕೆ ಅವಿವಾ & ಅಭಿಷೇಕ್ ನಿಶ್ಚಿತಾರ್ಥ

ಶುಕ್ರವಾರ, 2 ಡಿಸೆಂಬರ್ 2022 (20:31 IST)
ಚಂದನವನದಲ್ಲಿ ತಾರೆಯರ ಸಾಲು ಸಾಲು ಶುಭ ಕಾರ್ಯಗಳು ನಡೆಯುತ್ತಲೇ ಇವೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲಾ ಕಲಾವಿದರು ಮದುವೆಯಲ್ಲಿ ಭಾಗಿಯಾಗಿ  ನವಜೋಡಿಗೆ ಶುಭ ಹಾರೈಸಿದರು. ಮತ್ತೊಂದು ಜೋಡಿ ನಟಿ ಹರಿಪ್ರಿಯಾ-ನಟ ವಸಿಷ್ಠ ಸಿಂಹ ಕೂಡ ಕೈ ಕೈ ಹಿಡಿದು ಮದುವೆ ಹಿಂಟ್ ಕೊಟ್ಟಿದ್ದಾರೆ. ಇದೀಗ ಮತ್ತೊಂದು ಜೋಡಿ ಸಪ್ತಪದಿ ತುಳಿಯೋಕೆ ರೆಡಿಯಾಗಿದೆ. ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್​​​​ ಮದುವೆಗೆ ರೆಡಿಯಾಗಿದ್ದಾರೆ. ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಅವರನ್ನುಅಭಿಷೇಕ್ ಅಂಬರೀಶ್ ವರಿಸಲಿದ್ದಾರೆ. ಮೊನ್ನೆಯಷ್ಟೇ ಸುಮಲತಾ ಅಂಬರೀಶ್ ಮನೆಯಲ್ಲಿ ವೀಳ್ಯ ಶಾಸ್ತ್ರ ನಡೆದಿದೆ. ಇದೇ ಡಿಸೆಂಬರ್ 11ಕ್ಕೆ ಅವಿವಾ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥವಾಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ