ಟೀಂ ಇಂಡಿಯಾ ಆಯ್ಕೆ ಸಮಿತಿಗೆ ವೆಂಕಟೇಶ್ ಪ್ರಸಾದ್, ಡಿ.ಗಣೇಶ್ ಅರ್ಜಿ

ಶುಕ್ರವಾರ, 2 ಡಿಸೆಂಬರ್ 2022 (09:40 IST)
ಮುಂಬೈ: ಟೀಂ ಇಂಡಿಯಾ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಹಿನ್ನಲೆಯಲ್ಲಿ ಹೊಸ ಆಯ್ಕೆ ಸಮಿತಿ ನೇಮಿಸಲಾಗುತ್ತಿದೆ.

ಇದೀಗ ಕನ್ನಡಿಗರಾದ, ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್ ಆಯ್ಕೆ ಸಮಿತಿ ಸದಸ್ಯತ್ವಕ್ಕೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ವೆಂಕಟೇಶ್ ಪ್ರಸಾದ್ ಈ ಮೊದಲೊಮ್ಮೆ ಕಿರಿಯರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು.

ಒಂದು ವೇಳೆ ವೆಂಕಟೇಶ್ ಪ್ರಸಾದ್ ಸ್ಥಾನ ಪಡೆದರೆ ಮುಖ್ಯಸ್ಥರಾಗುವ ಅರ್ಹತೆ ಹೊಂದಲಿದ್ದಾರೆ. ಮುಂಬರುವ ಶ್ರೀಲಂಕಾ ಸರಣಿ ವೇಳೆಗೆ ಹೊಸ ಆಯ್ಕೆ ಸಮಿತಿ ಅಧಿಕಾರ ಸ್ವೀಕರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ